ಸನ್ಮಾರ್ಗ ವಾರ್ತೆ
ಚೆನ್ನೈ, ಅ.12: ಚೀನದ ಅಧ್ಯಕ್ಷ ಕ್ಸಿಜಿನ್ ಪಿಂಗ್ ಉಳಿದುಕೊಂಡಿರುವ ಹೊಟೇಲಿನ ಹೊರಗೆ ಟಿಬೆಟ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಐಟಿಸಿ ಗ್ರಾಂಡ್ ಚೋಳ ಹೊಟೇಲಿನಲ್ಲಿ ಕ್ಸಿಜಿನ್ ಪಿಂಗ್ ಎರಡು ದಿವಸ ಇರಲಿದ್ದಾರೆ. ಹೊಟೇಲಿನ ಮುಂಭಾಗದಲ್ಲಿ ಟಿಬೆಟ್ ಬೆಂಬಲಿಗರು ಪ್ರತಿಭಟನೆ ನಡೆಸಿದರು.
ಇವರಲ್ಲದೇ, ಆರು ಮಂದಿ ಪ್ರತಿಭಟನಾಕಾರರನ್ನು ಚೆನ್ನೈ ಏರ್ಪೋಟ್ನಲ್ಲಿ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದರು. ಪ್ರತಿಭಟನಾಕಾರರು ಬೆಂಗಳೂರಿನಿಂದ ಬಂದಿದ್ದರು. ಶುಕ್ರವಾರ ಮಧ್ಯಾಹ್ನ ಚೆನ್ನೈಗೆ ಕ್ಸಿಜಿನ್ ಪಿಂಗ್ ಬಂದಿದ್ದಾರೆ. ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಚೆನ್ನೈಯಲ್ಲಿದ್ದಾರೆ. ಪ್ರಾಚೀನ ಮಹಾಬಲಿಪುರಂನಲ್ಲಿ ಶಿಜಿನ್ಪಿಂಗ್-ಮೋದಿಯವರ ನಡುವೆ ಅನೌಪಚಾರಿಕ ಶೃಂಗ ಸಭೆ ನಡೆಯುತ್ತಿದೆ.












