ಸನ್ಮಾರ್ಗ ವಾರ್ತೆ
ಲಕ್ನೊ,ಅ.14: ಬಾಬರಿ ಮಸೀದಿ ಪ್ರಕರಣದ ವಾದವು ಅಂತಿಮ ಹಂತಕ್ಕೆ ತಲುಪಿದ್ದು ತೀರ್ಪು ಪ್ರಕಟಿಸುವ ಮೊದಲು ಅಯೋಧ್ಯೆಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಘೋಷಿಸಿದೆ. ಡಿಸೆಂಬರ್ 6 ಕ್ಕೆ ಬಾಬರಿ ಮಸೀದಿ ಧ್ವಂಸದ ವಾರ್ಷಿಕವಾಗಿದ್ದು ತದನಂತರ ನಾಲ್ಕು ದಿವಸಗಳ ಕಾಲವಧಿಯವರೆಗೆ ಡಿಸೆಂಬರ್ ಹತ್ತರವರೆಗೆ ಅಯೋಧ್ಯೆ ಜಿಲ್ಲೆಯಲ್ಲಿ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ನವರಾತ್ರೆ ರಜೆಯ ಬಳಿಕ ಪ್ರಕರಣದಲ್ಲಿ ಅಂತಿಮ ವಾದ ಸುಪ್ರೀಂಕೋರ್ಟಿನಲ್ಲಿ ಇಂದು ಪುನರಾರಂಭವಾಗಲಿದೆ. ಸುನ್ನಿ ವಕ್ಫ್ ಬೋರ್ಡಿನ ವಾದ ಇಂದು ಪೂರ್ಣಗೊಳ್ಳಲಿದ್ದು ಮುಂದಿನ ಎರಡು ಮೂರು ದಿವಸಗಳಲ್ಲಿ ನಿರ್ಮೋಹಿ ಅಖಾಡದ ವಾದ ಪೂರ್ತಿಯಾಗಬಹುದು.
ಚೀಫ್ ಜಸ್ಟಿ ರಂಜನ್ ಗೊಗೊಯ್ ನವೆಂಬರ್ ಹದಿನೇಳಕ್ಕೆ ನಿವೃತ್ತರಾಗಲಿದ್ದು ಇದಕ್ಕಿಂತ ಮೊದಲು ಪ್ರಕರಣದಲ್ಲಿ ತೀರ್ಪು ನೀಡಲು ಸಂವಿಧಾನ ಪೀಠ ಯತ್ನಿಸುತ್ತಿದೆ. ಆದ್ದರಿಂದ ಅಕ್ಟೋಬರ್ ಹದಿನೇಳಕ್ಕೆ ಅಂತಿಮ ವಾದ ಪೂರ್ಣಗೊಳಿಸಬೇಕೆಂದು ಚೀಫ್ ಜಸ್ಟಿಸ್ ಸೂಚಿಸಿದ್ದಾರೆ.












