ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.14: ಅಯೋಧ್ಯೆಯ ಬಾಬರಿ ಮಸೀದಿ ಜಮೀನು ಹಿಂದೂಗಳಿಗೆ ನೀಡಿದರೆ ಭಾರತ ಮುಸ್ಲಿಮರಿಗೆ ಶಾಶ್ವತ ನೆಮ್ಮದಿ ಸಿಗಬಹುದು ಎಂದು ತಿಳಿಯುತ್ತಿರುವವರು ಮೂರ್ಖರ ಸ್ವರ್ಗದಲ್ಲಿದ್ದಾರೆ ಎಂದು ಮಾಜಿ ಸುಪ್ರೀಂಕೋರ್ಟು ಜಡ್ಜ್ ಜಸ್ಟಿಸ್ ಮಾರ್ಕಂಡೇಯ ಕಟ್ಜು ಹೇಳಿದ್ದಾರೆ.
ಅಲಿಗಡದ ವಿಸಿ ಚಿಂತನೆಯಂತೆ ವಿಷಯ ಧರ್ಮಕ್ಕೆ ಸಂಬಂಧಿಸಿದ್ದಲ್ಲ. ವೋಟಿಗಾಗಿ ಉದ್ರಿಕ್ತಗೊಳಿಸುವ ಕೋಮು ಅಗ್ನಿಯದ್ದೆಂದು ಕಟ್ಜು ತಮ್ಮ ಲೇಖನದಲ್ಲಿ ನೆನಪಿಸಿದ್ದಾರೆ. ಅಲಿಗಡ ಯುನಿವರ್ಸಿಟಿಯ ಮಾಜಿ ವಿಸಿ ಹಾಗೂ ಮಾಜಿ ಭೂಸೇನೆ ಉಪಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಸಮೀರುದ್ದೀನ್ ಶಾ ಲಕ್ನೊದಲ್ಲಿ ಕೆಲವು ಮುಸ್ಲಿಂ ಬುದ್ಧಿ ಜೀವಿಗಳನ್ನು ಕರೆದು ಕೊಂಡು ಬಂದು ಬಾಬರಿ ಭೂಮಿ ಹಿಂದೂಗಳಿಗೆ ಬಿಟ್ಟುಕೊಡಬೇಕೆಂದು ಹೇಳಿಕೆ ನೀಡಿದ್ದಕ್ಕೆ ಕಟ್ಜು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಚುನಾವಣೆಯಲ್ಲಿ ಹಿಂದೂ ವೋಟುಗಳು ಸಿಗಲು ಒಂದು ಉಪಕರಣ ಮಾತ್ರ ಅದು. ಹಿಂದೂ ಸಂಘಟನೆಗಳಿಗೆ ಭೂಮಿ ಕೊಟ್ಟರೆ ಸಮಸ್ಯೆ ಮುಗಿಯುತ್ತದೆ ಎಂದಾದರೆ ಅವರು ಮತ್ತೆ ಹೇಗೆ ರಾಜಕೀಯ ಮಾಡುತ್ತಾರೆ ಎಂದು ಕಟ್ಜು ಪ್ರಶ್ನಿಸಿದರು.
ಹಳೆಯ ಹಲವು ಮಂದಿರವನ್ನು ಮಸೀದಿಯನ್ನಾಗಿ ಮತ್ತು ಹಲವು ಮಸೀದಿಗಳನ್ನು ಮಂದಿರವನ್ನಾಗಿ ಮಾಡಲಾಗಿದೆ ಎಂದು ಕಟ್ಜು ಹೇಳಿದರು. ಇನ್ನು ಮುಂದೆ ಸಾಗುವ ಬದಲು ನಾವು ಹಿಂದೆ ಸಾಗಬೇಕೆಂದು ಹೇಳುವುದನ್ನು ಒಪ್ಪಲು ಸಾಧ್ಯವಿಲ್ಲ. ದಿಲ್ಲಿ ಜುಮಾ ಮಸೀದಿ ದೇವಸ್ಥಾನವಾಗಿತ್ತು ಮತ್ತು ಅದನ್ನು ಒಡೆದು ಹಾಕಿ ಮಂದಿರ ಕಟ್ಟಬೇಕೆಂದು ಸಾಕ್ಷಿ ಮಹಾರಾಜ್ ಹೇಳಿದರು. ತಾಜ್ಮಹಲ್ ಬಗ್ಗೆ ಕೂಡ ಇದರಂತೆ ಬೇರೆ ಕೆಲವರು ಹೇಳಿದರು. ಹೀಗೆ ಭಾರತದ ಯಾವುದೇ ಮಸೀದಿಯ ಬಗ್ಗೆ ಹಿಂದೆ ದೇವಸ್ಥಾನ ಆಗಿತ್ತೆನ್ನುವ ಹಕ್ಕುವಾದದೊಂದಿಗೆ ಯಾರೂ ಮುಂದೆ ಬರಬಹುದಾಗಿದೆ.
ಇಲ್ಲಿಗೆ ಇದು ಮುಗಿಯುವ ಕತೆಯೆಂದು ಹೇಗೆ ತಿಳಿಯಲು ಸಾಧ್ಯ? ಹಿಂದೆ ಒಮ್ಮೆ ಮಂದಿರವಿತ್ತೆನ್ನುವ ಕಾರಣಕ್ಕೆ ಮಸೀದಿ ಮುಸ್ಲಿಮರು ಬಿಟ್ಟುಕೊಡುವಂತೆ ಮಂದಿರ ಮಾಡಿದ ಮಸೀದಿಗಳನ್ನು ಹಿಂದೂಗಳು ಬಿಟ್ಟುಕೊಡುತ್ತಾರೆಯೇ? ಬಾಬರಿ ಜಮೀನು ಬಿಟ್ಟುಕೊಡುವುದರಿಂದ ಶಾಶ್ವತ ಪರಿಹಾರ ಆಗುತ್ತದೆಂದು ಸಮೀರುದ್ದೀನ್ ಶಾ ರಂತಹವರು ಹೇಳುತ್ತಿದ್ದಾರೆ. ಇವರು ಮೂರ್ಖರ ಸ್ವರ್ಗದಲ್ಲಿದ್ದಾರೆ. ಸೇನೆಯಲ್ಲಿ ದೊಡ್ಡ ಗೌರವವಿದ್ದ ಮಾಜಿ ವಿಸಿಗೆ ಭಾರತದ ರಾಜಕೀಯದ ವಾಸ್ತವಿಕತೆಗಳೇ ಗೊತ್ತಿಲ್ಲ.
ತನಗೆ ಶಾರ ಬಗ್ಗೆ ಗೊತ್ತು. ಅವರನ್ನು ತಪ್ಪು ಕಲ್ಪನೆ ಗೊಳಪಡಿಸಿದ್ದಾಗಿರಬಹುದು. ಭಾರತ ಉದ್ಯಮ ಅಭಿವೃದ್ಧಿ ಮಾಡದೆ, ಜಾತಿ, ಭಾಷೆ, ಗೋತ್ರ ಹೆಸರಿನಲ್ಲಿ ಪರಸ್ಪರ ಕಚ್ಚಾಡಿಸುವುದರಲ್ಲಿ ಅಭಿವೃದ್ಧಿ ಹೊಂದಿದ ದೇಶಗಳ ಕೈವಾಡ ಇರಬಹುದು ಎಂಬ ಶಂಕೆಯನ್ನು ಕಟ್ಜು ವ್ಯಕ್ತಪಡಿಸಿದ್ದಾರೆ.












