ಗಾಂಧೀಜಿ ಆತ್ಮಹತ್ಯೆ ಮಾಡಿದ್ದು ಹೇಗೆ?: ಗುಜರಾತ್ ಶಾಲಾ ಪರೀಕ್ಷೆಯಲ್ಲಿ ಪ್ರಶ್ನೆ

0
759

ಸನ್ಮಾರ್ಗ ವಾರ್ತೆ

ಅಹ್ಮದಾಬಾದ್,ಅ.14: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಆತ್ಮಹತ್ಯೆ ಮಾಡಿದ್ದಾರೆ ಎಂದು ಧ್ವನಿಸುವಂತಿರುವ ಪ್ರಶ್ನೆಯನ್ನು ಗುಜರಾತಿನ ಶಾಲೆಯ ಪರೀಕ್ಷೆಗಳಲ್ಲಿ ಕೇಳಲಾಗಿದ್ದು ಗಾಂಧೀಜಿ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ? ಎಂಬ ಪ್ರಶ್ನೆಗೆ ಮಕ್ಕಳು ಉತ್ತರ ಬರೆಯಬೇಕಾಗಿದೆ. ಒಂಬತ್ತನೆ ತರಗತಿ ವಿದ್ಯಾಥಿಗಳ ಪ್ರಶ್ನೆ ಪತ್ರಿಕೆಯಲ್ಲಿ ಇತಿಹಾಸವನ್ನೇ ತಪ್ಪು ದಾರಿಗೆಳೆಯುವ ಪ್ರಶ್ನೆಯನ್ನು ಕೇಳಲಾಗಿದೆ.

ಘಟನೆ ವಿವಾದವಾಗಿದ್ದು ತನಿಖೆಗೆ ಆದೇಶಿಸಲಾಗಿದೆ. ಸುಫಲಂಶಾಲ ವಿಕಾಸ್ ಸಂಕುಲ್ ಎಂಬ ಸಂಘಟನೆಯ ಅಡಿಯಲ್ಲಿರುವ ಶಾಳೆಯ ಪರೀಕ್ಷೆಯಲ್ಲಿ ಈ ಪ್ರಶ್ನೆ ಕಾಣಿಸಿಕೊಂಡಿದೆ. ಸಂಘಟನೆಯ ಅಡಿಯಲ್ಲಿ ಸರಕಾರದ ಅನುದಾನ ಪಡೆಯುತ್ತಿರುವ ಹಲವು ಶಾಲೆಗಳಿವೆ. ಗಾಂಧೀಜಿ ಕುರಿತ ಪ್ರಶ್ನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ತನಿಖೆ ಘೋಷಿಸಿದೆ ಎಂದು ವರದಿ ಬಂದ ಮೇಲೆ ಕ್ರಮ ಜರಗಿಸಲಾಗುವುದು ಎಂದು ಗಾಂಧಿನಗರ ಜಿಲ್ಲಾ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ಪ್ರಶ್ನೆಯನ್ನು ಶಾಲೆಯವರೇ ತಯಾರಿಸಿದ್ದಾರೆ. ರಾಜ್ಯದ ಶಿಕ್ಷಣ ಇಲಾಖೆಯ ಪಾತ್ರ ಈ ವಿಷಯದಲ್ಲಿಲ್ಲ ಎಂದು ಶಿಕ್ಷಣಾಧಿಕಾರಿ ತಿಳಿಸಿದರು.