ಸನ್ಮಾರ್ಗ ವಾರ್ತೆ
ಚೆನ್ನೈ,ಅ.15: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯನ್ನು ಸಮರ್ಥಿಸಿಕೊಂಡು ಭಾಷಣ ಮಾಡಿದ ತಮಿಳ್ ಮಕ್ಕಳ್ ಕಕ್ಷಿ ನಾಯಕ ಸೀಮಾನ್ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.
ವಿಕ್ಕರವಾಂಡಿ ವಿಧಾನಸಭಾ ಉಪಚುನಾವಣಾ ಪ್ರಚಾರದ ವೇಳೆ ಅವರು ರಾಜೀವ್ ಗಾಂಧಿಯನ್ನು ತಮಿಳರ ಶತ್ರು ಎಂದು ವಿಶ್ಲೇಷಿಸಿದರು. “ತಮಿಳರ ಶತ್ರು ರಾಜೀವ್ ಗಾಂಧಿ, ಹೌದು ನಾವು ರಾಜೀವ್ ಗಾಂಧಿಯನ್ನು ಕೊಂದೆವು. ಸರಿ. ರಾಜೀವ್ ಗಾಂಧಿ ಪ್ರಧಾನಿಯಾಗಿರುವಾಗ ಶ್ರೀಲಂಕಾಕ್ಕೆ ಭಾರತದ ಶಾಂತಿ ಸುರಕ್ಷಾ ಸೇನೆಯ ಕಳುಹಿಸಿ ತಮಿಳರನ್ನು ಅವರ ಮಾತೃದೇಶದಲ್ಲಿ ಕೊಂದು ಹಾಕಲಾಗಿದೆ. ಈ ಸ್ಥಿತಿಯಲ್ಲಿ 91ರಲ್ಲಿ ಶ್ರೀಪೆರಂಬಾತ್ತೂರಿನಲ್ಲಿ ರಾಜೀವ್ ಗಾಂಧಿ ಕೊಲ್ಲಲ್ಪಟ್ಟರು” ಅಭಿಮಾನಿಗಳ ಚಪ್ಪಾಳೆಯೊಂದಿಗೆ ಸೀಮಾನ್ ಹೇಳಿದರು.
ಸೀಮಾನ್ರ ಆಕ್ಷೇಪಾರ್ಹ ಭಾಷಣದಲ್ಲಿ ವಯುಪ್ಪುರಂ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಮೇಶ್ ಪೊಲೀಸರಿಗೆ ದೂರು ಸಲ್ಲಿಸಿದ್ದು ಮತ್ತು ದೇಶದ್ರೋಹ ಕೇಸು ದಾಖಲಿಸಬೇಕು ಹಾಗೂ ತಮಿಳ್ ಮಕ್ಕಳ್ ಕಕ್ಷಿ ಪಾರ್ಟಿಯನ್ನು ನಿಷೇಧಿಸಬೇಕೆಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.












