ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.15: ಬಾಬರಿ ಜಮೀನಿನ ಪ್ರಕರಣದ ತೀರ್ಪು ಹೇಗೆ ಬಂದರೂ ಎರಡು ಕಡೆಯವರು ಅದನ್ನು ಗೌರವದಿಂದ ಸ್ವೀಕರಿಸಲಿದ್ದಾರೆ ಎಂದು ಭಾವಿಸುವೆ. ಪ್ರಕರಣದಲ್ಲಿ ತೀರ್ಪು ಬರಲಿದ್ದು ಗೃಹ ಸಚಿವಾಲಯ ಸಂಪೂರ್ಣ ಸಿದ್ಧವಾಗಿದ್ದು ಕಾನೂನು ವ್ಯವಸ್ಥೆಯ ಸಮಸ್ಯೆ ಉದ್ಭವಿಸಲು ಬಿಡುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.
ಇಂಡಿಯಾ ಟು ಡೆ ಟಿವಿಗೆ ನೀಡಿದ ಸಂದರ್ಶನದಲ್ಲಿ ಅಮಿತ್ ಶಾ ಸರಕಾರದ ನಿಲುವನ್ನು ವಿವರಿಸಿದರು. ಆದರೆ ಸುಪ್ರೀಂಕೋರ್ಟು ತೀರ್ಪನ್ನು ಜನ ಸ್ವೀಕರಿಸುವರು. ಯಾರಿಗೂ ಹೇಳಿಕೆ ನೀಡಬಹುದಾಗಿದೆ. ಬಾಬರಿ ಭೂಮಿ ವಿವಾದ ದೇಶದ ಬಹಳ ಹಳೆಯ ಪ್ರಕರಣವಾಗಿದ್ದು ಇದುವರೆಗೆ ತೀರ್ಪು ಬಂದಿಲ್ಲ. ಇದು ಅನ್ಯಾಯವಾಗುತ್ತದೆ ಎಂದು ಅಮಿತ್ ಶಾ ಹೇಳಿದರು.
ಪ್ರಕರಣದಲ್ಲಿ ವಾದ ಅಂತಿಮ ಘಟ್ಟದಲ್ಲಿದ್ದು ಚೀಫ್ ಜಸ್ಟಿಸ್ ರಂಜಿತ್ ಗೊಗೊಯ್ ನವೆಂಬರ್ ಹದಿನೇಳಕ್ಕೆ ನಿವೃತ್ತರಾಗಲಿರುವರು. ಅಕ್ಟೋಬರ್ 17ಕ್ಕೆ ಅಂತಿಮವಾದ ಪೂರ್ಣವಾಗುತ್ತದೆ. ತೀರ್ಪು ಬರುವುದಕ್ಕಿಂತ ಮುಂಚಿತವಾಗಿ ಅಯೋಧ್ಯೆಯ ಜಿಲ್ಲಾಡಳಿತ ನಿಷೇಧಾಜ್ಞೆ ಘೋಷಿಸಿದೆ.












