ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.16: ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಿಕ್ಕಟ್ಟಿನಲ್ಲಿಹಾಕಿದ್ದು ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್, ಮಾಜಿ ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಯುಪಿಎ ಕಾಲದಲ್ಲಿ ಭಾರತದಲ್ಲಿ ಸಾಲ ಮರುಪಾವತಿ ಆಗಿಲ್ಲ ಎಂದು ಅವರು ಆರೋಪಿಸಿದರು.
ಮನ್ಮೋಹನ್ ಸಿಂಗ್, ರಘುರಾಮ್ ರಾಜನ್ ಆಡಳಿತದಲ್ಲಿ ಭಾರತದ ಬ್ಯಾಂಕುಗಳು ತುಂಬ ಕೆಟ್ಟ ಸ್ಥಿತಿಗೆ ತಲುಪಿತ್ತು ಆದರೆ ಇದು ಯಾರಿಗೂ ಗೊತ್ತಿರಲಿಲ್ಲ ಎಂದು ನಿರ್ಮಲಾ ಹೇಳಿದರು. ಕೊಲಂಬಿಯ ಯುನಿವರ್ಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಹೇಳಿದರು. ದೇಶ ಎದುರಿಸುವ ಆರ್ಥಿಕ ಬಿಕ್ಕಟ್ಟಿನಲ್ಲಿ ನಿರ್ಮಲಾ ವಿರುದ್ಧ ಟೀಕೆ ಕೇಳಿ ಬಂದಿದ್ದವು. ದೇಶದ ವಿತ್ತ ಕ್ಷೇತ್ರದಲ್ಲಿ ಕಠಿಣ ಆರ್ಥಿಕ ಮುಗ್ಗಟ್ಟು ಇದೆ.












