ಸನ್ಮಾರ್ಗ ವಾರ್ತೆ
ತಿರುವನಂತಪುರಂ,ಅ.16: ಕಾಟ್ಟಾಕಡ ಎಂಬಲ್ಲಿ ಉದ್ಯೋಗ ಖಾತರಿ ಯೋಜನೆ ಕಾರ್ಮಿಕರೊಬ್ಬರ ಕೊರಳಿಗೆ ಹೆಬ್ಬಾವು ಸುತ್ತಿಕೊಂಡಿತು. ಭುವನ ಚಂದ್ರನ್ ನಾಯರ್‍ರ ಕೊರಳಿಗೆ ಹೆಬ್ಬಾವು ಸರದಂತೆ ಸುತ್ತಿಕೊಂಡಿದೆ. ಜೊತೆಗೆ ಕೆಲಸ ಮಾಡುವ ಇತರ ಕಾರ್ಮಿಕರ ಸಮಯ ಪ್ರಜ್ಞೆ ಹೆಬ್ಬಾವನ್ನು ಬೇರ್ಪಡಿಸಲು ಸಾಧ್ಯವಾಗಿದೆ. ಭುವನ ಚಂದ್ರನ್‍ರು ಅಪಾಯಗಳಿಲ್ಲದೆ ಪಾರಾಗಿದ್ದಾರೆ.












