ಸನ್ಮಾರ್ಗ ವಾರ್ತೆ
ಮುಂಬೈ,ಅ.18: ಕಳೆದ ಐದು ವರ್ಷ ಆಳ್ವಿಕೆ ಮಾಡಿದವರು ಆರ್ಥಿಕ ಬಿಕ್ಕಟ್ಟಿನ ಹೆಸರಿನಲ್ಲಿ ಯುಪಿಎ ಸರಕಾರವನ್ನು ದೂಷಿಸಲು ಬರುವುದು ಬೇಡ ಎಂದು ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ ಹೇಳಿದ್ದಾರೆ.
ಕೇಂದ್ರ ಸರಕಾರದ ಅಸಾಮರ್ಥ್ಯ ದೇಶದ ಆರ್ಥಿಕ ಬಿಕ್ಕಟ್ಟು ಬಿಗಡಾಯಿಸಲು ಕಾರಣವೆಂದು ಅವರು ಹೇಳಿದರು. ಬ್ಯಾಂಕ್ ಬಿಕ್ಕಟ್ಟಿಗೆ ಕಾರಣ ಮನ್ಮೋಹನ್ ಸಿಂಗ್ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ರ ಹೇಳಿಕೆಗೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಸಂಬಂಧಿಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಜನೋಪಕಾರದ ನೀತಿ ಸ್ವೀಕರಿಸಲು ಕೇಂದ್ರ ಸಿದ್ಧವಿಲ್ಲ. ಅದಕ್ಕೆ ಅವರಲ್ಲಿ ಜಿಗುಪ್ಸೆ ಇದೆ. ಇದು ನಿರ್ಮಲಾರ ಹೇಳಿಕೆಯಲ್ಲಿ ವ್ಯಕ್ತವಾಗುತ್ತಿದೆ. ರೋಗ ಮತ್ತು ಕಾರಣಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಆರ್ಥಿಕ ಸಮಸ್ಯೆ ಪರಿಹರಿಸಬೇಕು. ಅದು ಆಗದ್ದಕ್ಕೆ ಪ್ರತಿಪಕ್ಷವನ್ನು ಸರಕಾರ ದೂಷಿಸುತ್ತಿದೆ ಎಂದು ಮನ್ಮೋಹನ್ ಹೇಳಿದರು.
ತಾನು ಪ್ರಧಾನಿ ಮಂತ್ರಿಯಾಗಿದ್ದಾಗ ಕೆಲವು ಕೊರತೆಗಳು ಆಗಿವೆ ಎಂದು ಯಾವಾಗಲೂ ಯುಪಿಎ ಸರಕಾರಕ್ಕೆ ಕೆಸರೆರೆಚುವುದಕ್ಕೆ ಅರ್ಥವಿಲ್ಲ. ಯಾಕೆಂದರೆ ಕಳೆದ ಐದು ವರ್ಷಗಳಲ್ಲಿ ನೀವು ಅಧಿಕಾರದಲ್ಲಿರುವುದು. ಪ್ರತಿ ವರ್ಷ ಬೆಳವಣಿಗೆ ದರ ಕಡಿಮೆಯಾಗಿದ್ದರಿಂದ ಭಾರತದ ಅರ್ಥವ್ಯವಸ್ಥೆ 2014ರಲ್ಲಿ ಐದು ಲಕ್ಷ ಕೋಟಿ ಡಾಲರ್ಗೆ ತಲುಪಬೇಕಿತ್ತೆಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಮನ್ಮೋಹನ್ ಸಿಂಗ್ ಹೇಳಿದರು.












