ಸನ್ಮಾರ್ಗ ವಾರ್ತೆ
ವಾಷಿಂಗ್ಟನ್,ಅ.18: ಭಾರತ ಈಗಲೂ ಜಗತ್ತಿನಲ್ಲಿ ಅತಿ ವೇಗದಲ್ಲಿ ಬೆಳೆಯುವ ಅರ್ಥ ವ್ಯವಸ್ಥೆಯನ್ನು ಹೊಂದಿದೆ ಎಂದು ವಿತ್ತ ಸಚಿವೆ ಸೀತಾರಾಮನ್ ಹೇಳಿದ್ದಾರೆ.
ದೇಶದ ಬೆಳವಣಿಗೆ ದರ ಹೆಚ್ಚಿಸುವ ಪ್ರಯತ್ನವನ್ನು ಸರಕಾರ ಮಾಡುತ್ತಿದೆ. ಐಎಂಎಫ್ ಭಾರತದ ಬೆಳವಣಿಗೆ ದರ ಕಡಿಮೆಯಾಗಿದೆ ಎಂದು ವಿಶ್ಲೇಷಿದ ಬೆನ್ನಿಗೆ ನಿರ್ಮಲಾರ ಪ್ರತಿಕ್ರಿಯೆ ಬಂದಿದೆ. ಬೆಳವಣಿಗೆ ದರ ಕಡಿಮೆಯಾಗಲಿದೆ ಎಂದು ಐಎಂಫ್ ಹೇಳಿದೆ.
ಆದರೆ, ಆದರೂ ಜಗತ್ತಿನಲ್ಲಿ ಅತಿವೇಗದಲ್ಲಿ ಭಾರತದ ಆರ್ಥಿಕ ವ್ಯವಸ್ಥೆ ಬೆಳವಣಿಗೆಯಾಗುತ್ತಿದೆ. ಜಗತ್ತಿನ ಎಲ್ಲ ಅರ್ಥವ್ಯವಸ್ಥೆಗಳನ್ನು ದರವನ್ನು ವಿವರಿಸಿದೆ. ಚೀನದೊಂದಿಗೆ ಭಾರತದ ಅರ್ಥವ್ಯವಸ್ಥೆಯನ್ನು ಹೋಲಿಸುವ ಅಗತ್ಯವಿಲ್ಲ ಎಂದು ಸೀತಾರಾಮನ್ ಹೇಳಿದರು.
ಹಿಂದಿನ ವರ್ಷಗಳಂತೆ ಎಂಟು, ಏಳು ಶೇಕಡಾ ದರಗಳಲ್ಲಿ ಭಾರತದ ಬೆಳವಣಿಗೆ ದರ ಇಲ್ಲ. ಅದರೆ ಉನ್ನತ ಬೆಳವಣಿಗೆ ದರ ಸಾಧಿಸಲು ಆರ್ಥಿಕ ವ್ಯವಸ್ಥೆ ಶಕ್ತವಾಗಿದೆ. ಎಲ್ಲ ಸೆಕ್ಟರ್ಗಳು ಬೇಡಿಕೆಗಳನ್ನು ಆಲಿಸುತ್ತಿದ್ದೇನೆ. ಆರ್ಥಿಕ ಮಾಂದ್ಯವನ್ನು ಪರಿಶೀಲಿಸಿಲ್ಲ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.












