ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.18: ಸಂಸದರಿಗೆ ಸಂಸ್ಕೃತ ಬರೆಯಲು ಮಾತಾಡಲು ತರಬೇತಿ ನೀಡುವುದಕ್ಕೆ ಆರೆಸ್ಸೆಸ್ನೊಂದಿಗೆ ಸಂಬಂಧ ಇರುವ ಎನ್ಜಿಒ ಮುಂದೆ ಬಂದಿದೆ.
ಹತ್ತು ದಿವಸದಲ್ಲಿ ಸಂಸ್ಕೃತ ಕಲಿಸಲು ಅನುಮತಿ ಕೇಳಿ ಸಂಸ್ಕೃತ ಭಾರತಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾರನ್ನು ಸಂಪರ್ಕಿಸಿದೆ.
ಈ ಹಿಂದೆಯೂ ಇಂತಹ ತರಬೇತಿ ನೀಡಲಾಗಿತ್ತೆಂದು ಸಂಘಟನೆಯ ಅಖಿಲ ಭಾರತ ಸಂಯೋಜಕ ದಿನೇಶ್ ಕಾಮತ್ ಹೇಳಿದರು. ಮನವಿಯನ್ನು ಪರಿಗಣಿಸುವೆ ಎಂದು ಸಂಘಟನೆಯ ಪ್ರತಿನಿಧಿಗಳಿಗೆ ಬಿರ್ಲಾ ತಿಳಿಸಿರುವುದಾಗಿ ಕಾಮತ್ ಹೇಳಿದ್ದಾರೆ.












