ಮತ ಯಂತ್ರ, ಬ್ಯಾಲೆಟ್ ಪೆಟ್ಟಿಗೆ ಸಂಯೋಜನೆ ವ್ಯವಸ್ಥೆ ಬೇಕು- ದಿಗ್ವಿಜಯ ಸಿಂಗ್

0
561

ಹೊಸದಿಲ್ಲಿ,ಅ.21: ಮತಯಂತ್ರ, ಬ್ಯಾಲೆಟ್ ಪೆಟ್ಟಿಗೆ ಸಂಯೋಜನೆಯ ವ್ಯವಸ್ಥೆ ಅಗತ್ಯವಿದೆ ಎಂದು ಚುನಾವಣಾ ಆಯೋಗಕ್ಕೆ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆಗ್ರಹ ವ್ಯಕ್ತಪಡಿಸಿದರು.

ಹರಿಯಾಣ, ಮಹಾರಾಷ್ಟ್ರಗಳ ವಿಧಾನಸಭಾ ಚುನಾವಣೆ ನಡೆಯುವ ವೇಳೆಯೇ ದಿಗ್ವಿಜಯ್ ಸಿಂಗ್‍ರಿಂದ ಈ ಆಗ್ರಹ ಬಂದಿದೆ. ವಿವಿಪ್ಯಾಟ್ ತಾಂತ್ರಿಕವಾಗಿ ಸರಿಯಿಲ್ಲ. ಈ ವಿಷಯದಲ್ಲಿ ಆಯೋಗ ಮೌನವಹಿಸಿದೆ. ಮತ ಯಂತ್ರ ಮತ್ತು ಮತ ಹಾಕಿದ ಬಳಿಕ ಏಳು ಸೆಕೆಂಡ್ ಮಾತ್ರ ತೋರಿಸುವ ವಿವಿ ಪ್ಯಾಟದ ಬದಲಿಗೆ ಮತದಾರರಿಗೆ ಪ್ರಿಂಟ್ ಮಾಡಿಕೊಡುವ ಪೇಪರ್ ವ್ಯವಸ್ಥೆ ಇರಬೇಕು. ಇದನ್ನು ಮತದಾರರು ನೋಡಿ ಪರಿಶೀಲಿಸಿ ಬಳಿಕ ಅದನ್ನು ಬ್ಯಾಲೆಟ್ ಪೆಟ್ಟಿಗೆಗೆ ಹಾಕಬೇಕು ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಇಂತಹ ವ್ಯವಸ್ಥೆ ಜಾರಿಗೆ ತಂದರೆ ಇವಿಎಂ ವಿರುದ್ಧ ಆರೋಪಗಳನ್ನು ಬಗೆಹರಿಸಲು ಸಾಧ್ಯವಿದೆ. ಮತಯಂತ್ರವನ್ನು ಹಿಂಪಡೆದು ಇಂತಹ ವ್ಯವಸ್ಥೆ ಜಾರಿಗೊಳಿಸಬೇಕಾಗಿದೆ. ಇದಕ್ಕೆ ಎಲ್ಲ ರಾಜಕೀಯ ಪಕ್ಷಗಳು ಒತ್ತಾಯ ಹೇರಬೇಕೆಂದು ಸಿಂಗ್ ಹೇಳಿದರು. ಬ್ಯಾಲೆಟ್ ಪೆಟ್ಟಿಗೆ ಲೆಕ್ಕ ಯಂತ್ರದ ಲೆಕ್ಕ ವ್ಯತ್ಯಾಸ ಕಂಡು ಬಂದರೆ ಬ್ಯಾಲೆಟ್ ಪೆಟ್ಟಿಗೆಯ ಆಧಾರದಲ್ಲಿ ಫಲಿತಾಂಶ ಪ್ರಕಟಿಸಬೇಕೆಂದು ಅವರು ಹೇಳಿದರು.