ಸನ್ಮಾರ್ಗ ವಾರ್ತೆ
ಹೊಸದಿಲ್ಲಿ/ಇಸ್ಲಾಮಾಬಾದ್,ಅ.21: ಪಾಕಿಸ್ತಾನದ ಕರ್ತಾರ್ಪುರ್ ಕಾರಿಡಾರಿನ ಅನೌಪಚಾರಿಕ ಉದ್ಘಾಟನೆ ಸಮಾರಂಭದಲ್ಲಿ ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ ಭಾಗವಹಿಸುವುದಿಲ್ಲ. ಆದರೆ, ನವೆಂಬರ್ ಒಂಬತ್ತರಂದು ಕಾರಿಡಾರ್ ಒಪ್ಪಿಸುವಾಗ ಪಾಕಿಸ್ತಾನದ ಗುರುದ್ವಾರ ಸಂದರ್ಶಿಸಲು ತೀರ್ಥಯಾತ್ರಿಕರಾಗಿ ಅವರು ತೆರಳಲಿದ್ದಾರೆ ಎಂದು ಮನ್ಮೋಹನ್ ಸಿಂಗ್ ನಿಕಟವರ್ತಿಗಳು ತಿಳಿಸಿದ್ದಾರೆ.
ಕರ್ತಾರ್ಪುರ ಕಾರಿಡಾರ್ ಉದ್ಘಾಟನೆ ಸಮಾರಂಭದಲ್ಲಿ ಮನ್ಮೋಹನ್ ಸಿಂಗ್ ಸಾಮಾನ್ಯ ವ್ಯಕ್ತಿಯಂತೆ ಪಾಲ್ಗೊಳ್ಳಲಿದ್ದಾರೆ ಅವರು ತನ್ನ ಆಮಂತ್ರಣ ಸ್ವೀಕರಿಸಿದ್ದಾರೆ ಎಂದು ಪಾಕಿಸ್ತಾನದ ವಿದೇಶ ಸಚಿವ ಶಾ ಮಹ್ಮೂದ್ ಕುರೇಶಿ ಶನಿವಾರ ಪತ್ರಕರ್ತರಿಗೆ ತಿಳಿಸಿದ್ದರು.
ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ರ ನೇತೃತ್ವದಲ್ಲಿ ಪಾಕಿಸ್ತಾನದ ಸಿಖ್ ಯಾತ್ರಾ ಸ್ಥಳಗಳಿಗೆ ಸಂದರ್ಶಿಸಲು ಮೊದಲ ತಂಡ ಹೋಗುತ್ತಿದೆ. ಇವರ ಜೊತೆ ಮನ್ಮೋಹನ್ ಸಿಂಗ್ ಇರಲಿದ್ದಾರೆ. ತಂಡ ಅದೇ ದಿವಸ ಮರಳಿ ಬರಲಿದೆ.
ಪಾಕಿಸ್ತಾನದಲ್ಲಿರುವ ಕಾರಿಡಾರನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸಿಖ್ ಸಮುದಾಯಕ್ಕೆ ಒಪ್ಪಿಸಲಿದ್ದಾರೆ. ವೀಸಾ ರಹಿತವಾಗಿ ಒಂದು ದಿವಸ 5000 ತೀರ್ಥಯಾತ್ರಿಕರು ಇಲ್ಲಿಗೆ ಸಂದರ್ಶಿಸುವ ಅವಕಾಶ ಕಲ್ಪಿಸಿಕೊಡಲಾಗಿದೆ. ತೀರ್ಥಯಾತ್ರಿಕರು 20 ಡಾಲರ್ ಶುಲ್ಕ ಕೊಡಬೇಕೆಂದು ಪಾಕಿಸ್ತಾನ ಶರ್ತ ಇದ್ದುದರಿಂದ ಆನ್ಲೈನ್ ರಿಜಿಸ್ಟ್ರೇಶನ್ ಆರಂಭವಾಗಿಲ್ಲ. ಶುಲ್ಕ ವಿಧಿಸಬಾರದು ಮತ್ತು ವಿಶೇಷ ಸಂದರ್ಭದಲ್ಲಿ ಹತ್ತು ಸಾವಿರ ತೀರ್ಥ ಯಾತ್ರಿಕರಿಗೆ ಅವಕಾಶ ಕಲ್ಪಿಸಬೇಕೆಂದು ಭಾರತ ಆಗ್ರಹಿಸಿದೆ.
ಕರ್ತಾರ್ಪುರ್ ಸಂದರ್ಶಿಸಲು ತೀರ್ಥಯಾತ್ರಿಕರಿಗೆ ಪ್ರೊಟೊಕಾಲ್ ಅಧಿಕಾರಿಗಳಿಗೆ ಬರುವ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಲಾಗಿದೆ. ಈ ವಿಷಯದಲ್ಲಿ ಪಾಕಿಸ್ತಾನದಿಂದ ಉತ್ತರ ಸಿಕ್ಕಿಲ್ಲ. ಮೂಲ ಸೌಕರ್ಯ ಹೆಚ್ಚಿಸಿದ ಬಳಿಕ ಹತ್ತು ಸಾವಿರ ತೀರ್ಥಯಾತ್ರಿಕರಿಗೆ ಅವಕಾಶ ಕಲ್ಪಿಸುವ ಬಗ್ಗೆ ಚಿಂತಿಸಲಾಗುವುದು ಎಂದು ಪಾಕಿಸ್ತಾನ ಹೇಳಿತ್ತು. ಕಾರಿಡಾರಿನ ಭಾರತದ ಭಾಗದ ಉದ್ಘಾಟನೆಯನ್ನು ನವೆಂಬರ್ ಎಂಟರಂದು ಪ್ರಧಾನಿ ನರೇಂದ್ರ ಮೋದಿ ನಿರ್ವಹಿಸಲಿದ್ದಾರೆ.












