ಝಾರ್ಕಂಡಿನಲ್ಲಿ ಬಿಜೆಪಿ-ಜೆಡಿಯು ಸಖ್ಯ ಇಲ್ಲ!

0
472

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.23: ಝಾರ್ಕಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಸಖ್ಯ ಇಲ್ಲ ಎನ್ನುವ ಸೂಚನೆ ಲಭ್ಯವಾಗಿದೆ. ಡಿಸೆಂಬರಿನಲ್ಲಿ ನಡೆಯುವ ಚುನಾವಣೆಯಲ್ಲಿ ಎರಡು ಪಕ್ಷಗಳು ಬೇರೆ ಬೇರೆಯಾಗಿ ಸ್ಪರ್ಧಿಸಲಿವೆ.

ಜೆಡಿಯುಗೆ ದೊಡ್ಡ ಸಾಧನೆ ಮಾಡಲು ಸಾಧ್ಯವಿಲ್ಲ. ಬಿಜೆಪಿ ಗರಿಷ್ಠ ಸೀಟುಗಳನ್ನು ಗೆಲ್ಲುವ ಗುರಿ ಹೊಂದಿದೆ. ಝಾರ್ಕಂಡಿನಲ್ಲಿ 65 ಸೀಟುಗಳನ್ನು ಗೆಲ್ಲುವುದು ಪಾರ್ಟಿಯ ಗುರಿಯಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.

ಕಳೆದ ಮೂರು ಚುನಾವಣೆಗಳಲ್ಲಿ ಯಾವ ಪಾರ್ಟಿಗೂ ಝಾರ್ಕಂಡಿನಲ್ಲಿ ಬಹುಮತ ಸಿಕ್ಕಿಲ್ಲ. ಕಳೆದ ಚುನಾವಣೆಯಲ್ಲಿ ಜೆಡಿಯು ಒಂದು ಸ್ಥಾನವನ್ನು ಗೆದ್ದುಕೊಂಡಿಲ್ಲ.