ತಿಹಾರ್ ಜೈಲಿನಲ್ಲಿ ಡಿಕೆ ಶಿವಕುಮಾರ್‌ರನ್ನು ಭೇಟಿಯಾದ ಸೋನಿಯಾ ಗಾಂಧಿ

0
689

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.23: ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಕರ್ನಾಟಕದ ಪ್ರಮುಖ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್‍‌ರನ್ನು ತಿಹಾರ್ ಜೈಲಿನಲ್ಲಿ ಭೇಟಿಯಾಗಿದ್ದಾರೆ.

ಬುಧವಾರ ಬೆಳಗೆ ಸೋನಿಯಾ ತಿಹಾರ್ ಜೈಲಿಗೆ ಬಂದರು. ಡಿಕೆಶಿ ವಿರುದ್ಧ ಕಪ್ಪುಹಣ ಬಿಳಿ ಮಾಡಿದ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿದೆ. ಅವರನ್ನು ಇಡಿ ಐವತ್ತು ದಿನಗಳ ಹಿಂದೆ ಬಂಧಿಸಿತ್ತು. ಸೋನಿಯಾರ ಜೊತೆ ಕರ್ನಾಟಕದ ಉಸ್ತುವಾರಿ ಹೊಂದಿರುವ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಇದ್ದರು. ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಬಂಧಿಸಲಾಗಿದ್ದ ಕಾಂಗ್ರೆಸ್ ನಾಯಕ ಪಿ.ಚಿದಂಬರಂರನ್ನು ಕೂಡ ಸೋನಿಯಾ ಗಾಂಧಿ ಜೈಲಿನಲ್ಲಿ ಭೇಟಿಯಾಗಿದ್ದರು.

ಬಂಧನಕ್ಕೊಳಗಾದ ನಾಯಕರ ಜೊತೆ ಕಾಂಗ್ರೆಸ್ ಇದೆ ಎನ್ನುವ ಸಂದೇಶವನ್ನು ಸೋನಿಯಾ ಭೇಟಿಯ ಮೂಲಕ ನೀಡಲಾಗಿದೆ. ಬಿಜೆಪಿಯ ರಾಜಕೀಯ ದ್ವೇಷದ ಭಾಗವಾಗಿ ಡಿಕೆಶಿ ಮತ್ತು ಚಿದಂಬರಂರನ್ನು ಪ್ರಕರಣದಲ್ಲಿ ಸಿಲುಕಿಸಿ ಹಾಕಲಾಗಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ.