ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.23: ರಾಜಕೀಯ ಕೇಂದ್ರಗಳನ್ನು ಆಶ್ಚರ್ಯಕ್ಕೆ ತಳ್ಳುವ ಮೂಲಕ ಹರಿಯಾಣದ ಕಾಂಗ್ರೆಸ್-ಬಿಜೆಪಿ ಪರಸ್ಪರ ಮುಖಾಮುಖಿ ಹೋರಾಟ ನಡೆಸಲಿದೆ ಎಂದು ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದೆ. ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ ಮತಗಟ್ಟೆ ಸಮೀಕ್ಷೆ ಹರಿಯಾಣದಲ್ಲಿ ನಿಕಟ ಹೋರಾಟ ಇದೆ ಎಂದು ತಿಳಿಸಿದೆ. ಜೊತೆಗೆ ಯಾರಿಗೂ ಬಹುಮತ ಸಿಗುವುದಿಲ್ಲ ಎನ್ನಲಾಗಿದೆ.
ತೊಂಬತ್ತು ಶಾಸಕರ ವಿಧಾನಸಭೆಯಲ್ಲಿ 32ರಿಂದ 44 ಸೀಟುಗಳು ಬಿಜೆಪಿಗೆ ಮತ್ತು ಕಾಂಗ್ರೆಸ್ 30ರಿಂದ 42 ಸೀಟುಗಳನ್ನು ಪಡೆಯಲಿದೆ ಎನ್ನಲಾಗಿದೆ. 2014ರ ಚುನಾವಣೆಯಲ್ಲಿ ಬಿಜೆಪಿಗೆ 47 ಸೀಟುಗಳು ಸಿಕ್ಕಿದ್ದವು. ಕಾಂಗ್ರೆಸ್ ಹದಿನೈದು ಸೀಟು ಗಳಿಸಿತ್ತು. ಆದರೆ ಇತರ ಸಮೀಕ್ಷೆಗಳು ಬಿಜೆಪಿ ಹರಿಯಾಣದಲ್ಲಿ ಬಹುಮತ ಪಡೆಯಲಿದೆ ಎಂದು ತಿಳಿಸಿವೆ. ಇದಕ್ಕಿಂತ ಭಿನ್ನವಾಗಿ ಇಂಡಿಯಾ ಟುಡೆ- ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಟಗೊಂಡಿದೆ.












