ಅಭ್ಯರ್ಥಿಗಳ ಹೇರಿಕೆ; ಬಿಎಸ್‌ಪಿ ನಾಯಕರನ್ನು ಚಪ್ಪಲಿ ಹಾರ ಹಾಕಿ, ಕತ್ತೆ ಮೆರವಣಿಗೆ ನಡೆಸಿದ ಬಿಎಸ್‌ಪಿ ಕಾರ್ಯಕರ್ತರು!

0
720

ಸನ್ಮಾರ್ಗ ವಾರ್ತೆ

ಜೈಪುರ,ಅ.23: ಈವರೆಗೆ ಯಾರೂ ನೀಡದ ಶಿಕ್ಷೆಯನ್ನು ಪಾರ್ಟಿ ನಾಯಕರಿಗೆ ಬಿಎಸ್‍ಪಿ ಕಾರ್ಯಕರ್ತರು ನೀಡಿದ ಅಚ್ಚರಿ ಘಟನೆ ನಡೆದಿದೆ. ಪಾರ್ಟಿ ನಾಯಕರನ್ನೇ ಚಪ್ಪಲಿ ಹಾರ ಹಾಕಿ, ಮುಖಕ್ಕೆ ಕಪ್ಪು ಬಳಿದು ಕತ್ತೆ ಮೇಲೆ ಕೂರಿಸಿ ಮೆರವಣಿಗೆ ನಡೆಸಿದ್ದಾರೆ.

ಬಿಎಸ್‌ಪಿ ನಾಯಕಿ ಘಟನೆಯನ್ನು ಖಂಡಿಸಿದ್ದು ಇದರ ಹಿಂದೆ ಕಾಂಗ್ರೆಸ್ ಇದೆ ಎಂದು ಆರೋಪಿಸಿದ್ದಾರೆ. ಬಿಎಸ್‌ಪಿಯ ರಾಷ್ಟ್ರೀಯ ನಾಯಕ ರಾಮ್‌ಜಿ ಗೌತಮ್, ಸೀತಾರಾಮ್‍ರನ್ನು ಈ ರೀತಿ ಬಿಎಸ್‌ಪಿ ಕಾರ್ಯಕರ್ತರು ನಡೆಸಿಕೊಂಡಿದ್ದಾರೆ.

ಕಳೆದ ದಿವಸ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳನ್ನು ಹೊರಗಿನಿಂದ ತರಲಾಗಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ. ಸಮರ್ಥ ನಾಯಕರು ಪಾರ್ಟಿಯಲ್ಲಿದ್ದರೂ ಹಿಂದೆ ಬಿಜೆಪಿ, ಕಾಂಗ್ರೆಸ್ಸಿನಲ್ಲಿದ್ದವರಿಗೆ ಟಿಕೆಟು ನೀಡಲಾಯಿತು ಎಂದು ಅವರು ಹೇಳಿದ್ದಾರೆ.

ಹಲವು ಸಲ ಹೇಳಿದರೂ ಈ ನಾಯಕರು ಕಿವಿಕೊಟ್ಟಿಲ್ಲ. ಹಣ ತೆಗೆದುಕೊಂಡು ಅಭ್ಯರ್ಥಿಗಳನ್ನು ಹೊರಗಿನಿಂದ ಕರೆದುಕೊಂಡು ಬಂದಿದ್ದಾರೆ. ನಾವೆಲ್ಲ ಕೆಳಮಟ್ಟದಲ್ಲಿ ಕೆಲಸ ಮಾಡಲಿರುವವರು ಎಂದು ನಮ್ಮನ್ನು ನಾಯಕರು ನಿರ್ಲಕ್ಷಿಸಿ, ಶೋಷಣೆ ನಡೆಸುತ್ತಿದ್ದಾರೆ ತಮ್ಮದೇ ನಾಯಕರ ವಿರುದ್ಧ ಹಿರಿಯ ಬಿಎಸ್‌ಪಿ ಕಾರ್ಯಕರ್ತರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.