ಮಣಿಪುರದಲ್ಲಿ ಬಂಡುಕೋರ ನಾಯಕರಿಂದ ಸ್ವತಂತ್ರ ಸರಕಾರದ ಘೋಷಣೆ

0
560

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.31: ಮಣಿಪ್ಪುರ ಸ್ವತಂತ್ರ ಸರಕಾರವನ್ನು ಲಂಡನ್‍ನಲ್ಲಿರುವ ಬಂಡುಕೋರ ನಾಯಕರು ಘೋಷಿಸಿದ್ದಾರೆ. ಮಾಜಿ ರಾಜ ಲೈಶೇಂಬ ಸನಜೊಬರ ಬೆಂಬಲದಲ್ಲಿ ಸರಕಾರ ರಚಿಸಿದ್ದೇವೆ ಎಂದು ಮಣಿಪುರ್ ಸ್ಟೇಟ್ ಕೌನ್ಸಿಲಿಗೆ ಯಾಬಿನ್ ಬಿರನ್‍ ತಾನೆ ಮುಖ್ಯಮಂತ್ರಿ ಎಂದು ಘೋಷಿಸಿದ್ದಾರೆ.

ವಿದೇಶ ಸಚಿವರಾಗಿ ಅಂಡ್ ಸಮರ್‍ಜಿತ್ ಇದ್ದಾರೆ. ಇವರು ಲಂಡನ್‍ನಲ್ಲಿ ಪತ್ರಿಕಾಗೊಷ್ಠಿಯಲ್ಲಿ ಮಣಿಪುರದ ಸ್ವತಂತ್ರ ಸರಕಾರವನ್ನು ಘೋಷಿಸಿದರು. ಮಣಿಪುರ ಸರಕಾರ ನಿರಪರಾಧಿಗಳನ್ನು ಪೀಡಿಸುತ್ತಿದೆ, ಕೊಲ್ಲುತ್ತಿದೆ ಎಂದು ನಾಯಕರು ಆರೋಪಿಸಿದರು.

ಇದೇವೇಳೆ, ತನ್ನ ಅಂಗೀಕಾರದಲ್ಲಿ ಸ್ವತಂತ್ರ ಸರಕಾರ ರಚಿಸಲಾಗಿದೆ ಎನ್ನುವುದನ್ನು ಮಹಾರಾಜ ಲೈಸೇಂಬ ನಿರಾಕರಿಸಿದರು. ಘಟನೆಯ ಕುರಿತು ತನಿಖೆ ನಡೆಸಲಾಗುವುದು ಎಂದು ಎನ್.ಬೈರಣ್ ಸಿಂಗ್ ಹೇಳಿದ್ದಾರೆ.