ತಮಿಳ್ ನಟ ವಿಜಯ್ ಮನೆಗೆ ಬಾಂಬ್ ಬೆದರಿಕೆ: ಬಿಗಿ ಭದ್ರತೆ

0
708

ಸನ್ಮಾರ್ಗ ವಾರ್ತೆ

ಚೆನ್ನೈ, ಅ.31: ನಟ ವಿಜಯ್ ಮನೆಗೆ ಬಾಂಬ್ ಹಾಕುವ ಬೆದರಿಕೆ ಹಾಕಲಾಗಿದ್ದು, ಅವರ ವಸತಿಗೆ ಬಿಗು ಸುರಕ್ಷೆ ವ್ಯವಸ್ಥೆ ಒದಗಿಸಲಾಗಿದೆ. ಸಾಲಿಗ್ರಾಮದ ಅವರ ಮನೆಯಲ್ಲಿ ಬಾಂಬಿದೆ. ಸ್ವಲ್ಪ ಸಮಯದಲ್ಲಿ ಸ್ಫೋಟಗೊಳ್ಳಲಿದೆ ಎಂದು ಪೊಲೀಸ್ ಕಂಟ್ರೋಲ್ ರೂಮ್‍ಗೆ ಫೋನ್ ಕರೆ ಮಾಡಲಾಗಿತ್ತು ಎಂದು ವರದಿ ತಿಳಿಸಿದೆ.

ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಸುರಕ್ಷಾ ಪಡೆ ಸಾಲಿಗ್ರಾಮದ ಅವರ ಮನೆಗೆ ತಲುಪಿದ್ದು ವಿಜಯ್ ತಂದೆ ಎಸ್‍ಎ ಚಂದ್ರ ಶೇಖರ್, ಶೋಭಾ ಮನೆಯಲ್ಲಿದ್ದರು. ಫೋನ್ ಕರೆ ಬಂದದ್ದನ್ನು ಚಂದ್ರಶೇಖರ್‌ಗೆ ಪೊಲೀಸರು ತಿಳಿಸಿ ಭದ್ರತೆ ವ್ಯವಸ್ಥೆ ಮಾಡಿದರು.

ವಿಜಯ್, ಪತ್ನಿ ಸಂಗೀತಾ ಹಾಗೂ ಮಕ್ಕಳು ಈಸ್ಟ್ ಕಾಸ್ಟ್ ರಸ್ತೆಯ ಪನಯ್ಯೂರ್ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿಯೂ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಬಾಂಬ್ ಬೆದರಿಕೆ ಕುರಿತು ಪೊಲೀಸರು ಕೇಸು ದಾಖಲಿಸಿ ತನಿಖೆಯಲ್ಲಿ ವ್ಯಸ್ತರಾಗಿದ್ದಾರೆ. ತನಿಖೆ ಅಲಪ್ಪೂರಿನ ಒಬ್ಬ ಯುವಕನೆಡೆಗೆ ಸಾಗಿದೆ. ವಿಜಯ್ ದಳಪತ್ 64 ಎಂಬ ಸಿನೆಮಾ ಶೂಟಿಂಗ್‍ನಲ್ಲಿ ನಿರತರಾಗಿದ್ದಾರೆ.