ಸನ್ಮಾರ್ಗ ವಾರ್ತೆ
ಕೊಲ್ಕತಾ,ನ.5: ಬೀಫ್ ತಿನ್ನುವ ಬುದ್ಧಿಜೀವಿಗಳು ನಾಯಿ ಮಾಂಸವನ್ನು ತಿನ್ನಬಹುದು ಎಂದು ಪಶ್ಚಿಮ ಬಂಗಾಳ ಬಿಜೆಪಿ ಆಧ್ಯಕ್ಷ ದಿಲೀಪ್ ಘೋಷ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದನದ ಮಾಂಸ ತಿನ್ನುವವರ ವಿರುದ್ಧ ವಿವಾದ ಹೇಳಿಕೆ ನೀಡಿದ್ದು, ನಡುರಸ್ತೆಯಲ್ಲಿ ದನದ ಮಾಂಸ ತಿನ್ನುವ ಬುದ್ಧಿ ಜೀವಿಗಳು ನಾಯಿ ಮಾಂಸ ತಿನ್ನಿರಿ ಎನ್ನಬೇಕಾಗಿದೆ. ಯಾವ ಪ್ರಾಣಿ ತಿಂದರೂ ಅವರ ಆರೋಗ್ಯಕ್ಕೆ ಅದು ಹಾನಿಯಲ್ಲ ಎಂದು ಘೋಷ್ ಹೇಳಿದರು. ಬರ್ದ್ವಾನದಲ್ಲಿ ನಡೆದ ಗೋಪ ಅಷ್ಟಮಿ ಕಾರ್ಯಕ್ರಮದಲ್ಲಿ ಅವರು ಮಾತಾಡುತ್ತಿದ್ದರು.
ತಮ್ಮ ಮನೆಯಲ್ಲಿ ಏನು ಬೇಯಿಸಿ ತಿನ್ನಬಹುದು. ಆದರೆ ನಡು ರಸ್ತೆಯಲ್ಲಿ ತಿನ್ನಬಾರದು. ದನ ನಮ್ಮ ತಾಯಿ. ದನದ ಹಾಲು ನಮ್ಮ ಆರೋಗ್ಯವನ್ನು ಉಳಿಸುತ್ತದೆ. ತಾಯಿಯೊಂದಿಗೆ ಕೆಟ್ಟದಾಗಿ ವರ್ತಿಸುವವರೊಂದಿಗೆ ನಾವು ಯಾವ ರೀತಿ ವರ್ತಿಸುವೆವೋ ಹಾಗೆಯೇ ದನದ ಮಾಂಸ ತಿನ್ನುವವರೊಂದಿಗೆ ವರ್ತಿಸುತ್ತೇವೆ.
ಭಾರತದಲ್ಲಿ ದನದ ಕಸಾಯಿ, ಮಾಂಸ ತಿನ್ನುವುದು ಅಪರಾಧ ಎಂದು ದಿಲೀಫ್ ಘೋಷ್ ಹೇಳಿದರು. ನಾಡ ತಳಿಯ ದನದ ಹಾಲಿನಲ್ಲಿ ಚಿನ್ನ ಇದೆ. ಆದ್ದರಿಂದ ಉತ್ತಮ ಹಾಲಿಗೆ ಚಿನ್ನದ ಬಣ್ಣ ಇದೆ. ವಿದೇಶ ಪ್ರಾಣಿಗಳಲ್ಲಿ ಅದಿಲ್ಲ. ನಾಡ ತಳಿಯನ್ನು ನಾವು ತಾಯಿಯಂತೆ ರಕ್ಷಿಸಬೆಕಾಗಿದೆ ಎಂದು ಘೋಷ್ ಹೇಳಿದರು. ದಿಲೀಪ್ ಈ ಹಿಂದೆ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿ ವಿವಾದ ಸೃಷ್ಟಿಸಿದ್ದರು.












