ರಫೆಲ್ ಹಗರಣ: ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರಿಂಕೋರ್ಟು

0
530

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.14: ರಫೆಲ್ ವಿಮಾನ ವ್ಯವಹಾರದ ಭ್ರಷ್ಟಾಚಾರ ತನಿಖೆ ಅಗತ್ಯವಿಲ್ಲ ಎಂಬ ತೀರ್ಪಿನ ವಿರುದ್ಧ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟು ಪುರಸ್ಕರಿಸಿಲ್ಲ. ಪ್ರಕರಣದಲ್ಲಿ ಇನ್ನು ಎಫ್‍ಐಆರ್ ದಾಖಲಿಸುವಂತಿಲ್ಲ ಎಂದು ಕೋರ್ಟು ತಿಳಿಸಿದೆ.

ಇದೇ ವೇಳೆ, ಚೌಕಿದಾರ್ ಚೋರ್ ಹೆ ಎಂಬ ನರೇಂದ್ರ ಮೋದಿಯ ಕುರಿತು ಸುಪ್ರೀಂಕೋರ್ಟು ಹೇಳಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಯ ವಿರುದ್ಧ ಸಲ್ಲಿಸಿದ ಅರ್ಜಿಯಲ್ಲಿ ಕ್ರಮ ಜರಗಿಸದಿರಲು ನಿರ್ಧರಿಸಿದೆ. ಇನ್ನು ಮುಂದೆ ಇಂತಹ ಹೇಳಿಕೆಯನ್ನು ನೀಡುವಾಗ ಎಚ್ಚರಿಕೆ ವಹಿಸಬೇಕೆಂದು ರಾಹುಲ್ ಗಾಂಧಿಗೆ ಸೂಚಿಸಿದೆ.

ಚೀಫ್ ಜಸ್ಟಿಸ್ ರಂಜನ್ ಗೊಗೊಯಿ, ಜಸ್ಟಿಸ್ ಎಸ್‍ಕೆ ಕೌಲ್, ಕೆಎಂ ಜೋಸೆಫ್‍ರ ಪೀಠ ಅರ್ಜಿಯ ವಿಚಾರಣೆ ನಡೆಸಿತ್ತು. ಮೋದಿ ಸರಕಾರದ ರಫೇಲ್ ವ್ಯವಹಾರವನ್ನು ಎತ್ತಿ ಹಿಡಿದಿದ್ದ ಸುಪ್ರೀಂಕೋರ್ಟಿನ ವಿರುದ್ಧ ಅರುಣ್ ಶೌರಿ, ಯಶ್ವಂತ್ ಸಿನ್ಹಾ , ವಕೀಲ ಪ್ರಶಾಂತ್ ಭೂಷಣ್, ಎಎಪಿ ಸಂಸದ ಸಂಜಯ್ ಸಿಂಗ್‍ರ ಸಲ್ಲಿಸಿದ ಮರುಪರಿಶೀಲನಾ ಅರ್ಜಿಯನ್ನು ಕೋರ್ಟು ವಜಾಗೊಳಿಸಿದೆ. ರಫೇಲ್ ವ್ಯವಹಾರದ ಕುರಿತು 2018ರ ಡಿಸೆಂಬರ್ ನಾಲ್ಕರಂದು ನರೇಂದ್ರ ಮೋದಿ ಸರಕಾರಕ್ಕೆ ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ನೀಡಿತ್ತು.