ಮಂಗಳೂರು ಮಹಾನಗರಪಾಲಿಕೆ ಚುನಾವಣಾ: ಮಾಜಿ ಮೇಯರ್ ಗಳಿಗೆ ಸೋಲು, ಬೆಂಗ್ರೆ, ಕಾಟಿಪಳ್ಳದಲ್ಲಿ ಎಸ್‍ಡಿಪಿಐ

0
1437

ಮಂಗಳೂರು, ನ. 14: ಮಂಗಳೂರು ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯ ಮತಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಇತ್ತೀಚೆಗಿನ ವರದಿಗಳ ಪ್ರಕಾರ ಮಂಗಳೂರು ಮಹಾನಗರಪಾಲಿಕೆಯ ಕಾಟಿಪಳ್ಳ ವಾರ್ಡ್ ನಂಬ್ರ ಐದರಲ್ಲಿ ಎಸ್‍ಡಿಪಿಐ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಎಸ್‍ಡಿಪಿಐನ ಶಂಶಾದ್ ಅಬೂಬಕರ್ ಅವರು ಮಾಜಿ ಮೇಯರ್ ಗುಲ್ಝಾರ್ ಬಾನುರನ್ನು ಸೋಲಿಸಿ ಆಯ್ಕೆ ಯಾಗಿದ್ದಾರೆ. ಹಾಗೆಯೇ, ಬೆಂಗ್ರೆ 60ನೇ ವಾರ್ಡ್ ನಲ್ಲಿ ಎಸ್‍ಡಿಪಿಐ ನ ಮುನೀಬ್ ಬೆಂಗ್ರೆ ಅವರು ಆಯ್ಕೆಯಾಗಿದ್ದಾರೆ.

ಮಂಗಳೂರು ಪೋರ್ಟ್ ವಾರ್ಡ್ ನಂಬ್ರ 45ರಲ್ಲಿ ಸ್ಪರ್ಧಿಸಿದ್ದ ಮಾಜಿ ಮೇಯರ್ ಕೆ. ಅಶ್ರಫ್ ಅವರು ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ಲತೀಫ್ ವಿರುದ್ಧ ಸೋಲನುಭವಿಸಿದ್ದಾರೆ. ಕಾಂಗ್ರೆಸ್‍ನ ಈ ಇಬ್ಬರು ಮಾಜಿ ಮೇಯರ್ ಗಳೂ ಈ ಸಲದ ಚುನಾವಣೆಯಲ್ಲಿ ಸೋಲುಂಡಿದ್ದು, ಇಬ್ಬರೂ ಕಾಂಗ್ರೆಸ್‍ನಿಂದ ಸ್ಪರ್ಧಿಸಿರಲಿಲ್ಲ.