ಅರ್ಥವ್ಯವಸ್ಥೆ ಐಸಿಯುನಲ್ಲಿದೆ; ಸಂವಿಧಾನದ ಕೊಲೆ ನಡೆಸುತ್ತಿದ್ದಾರೆ- ರಾಹುಲ್ ಗಾಂಧಿ

0
648

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ. 14: ಭಾರತದ ಅರ್ಥವ್ಯವಸ್ಥೆ ಐಸಿಯುನಲ್ಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ರಾಮ್‍ಲೀಲಾ ಮೈದಾನದಲ್ಲಿ ಕಾಂಗ್ರೆಸ್‍ನ ಭಾರತ್ ಬಚಾವೊ ರಾಲಿಯ ಮುಂಚಿತವಾಗಿ ಅವರು ಟ್ವೀಟ್ ಮಾಡಿದ್ದು, ಪೌರತ್ವ ತಿದ್ದುಪಡಿ ಕಾನೂನಿನ ಬಗ್ಗೆ ರಾಹುಲ್ ಗಾಂಧಿ ಬಿಜೆಪಿಯನ್ನು ಟೀಕಿಸಿದ್ದಾರೆ. ಸಂವಿಧಾನದ ಕಗ್ಗೊಲೆ ನಡೆಸಲಾಗುತ್ತಿದೆ ಎಂದು ರಾಹುಲ್ ಹೇಳಿದರು.

ರಾಳಿಯೂ ಬಿಜೆಪಿಯ ಸರ್ವಾಧಿಕಾರದ ವಿರುದ್ಧ ಕಾಂಗ್ರೆಸ್‍ನ ಕಾರ್ಯಕ್ರಮವಾಗಿದೆ ಎಂದು ಅವರು ಹೇಳಿದರು. ಜನರನ್ನು ವಿಭಜಿಸುವ ಬಿಜೆಪಿ ರಾಜಕೀಯದ ವಿರುದ್ಧ ಕಾಂಗ್ರೆಸ್ ರಾಲಿ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯ ವೈಫಲ್ಯವನ್ನು ರಾಲಿಯಲ್ಲಿ ಎತ್ತಿ ತೋರಿಸಲಾಗುವುದು. ಪೌರತ್ವ ಕಾನೂನಿನ ವಿರುದ್ಧ ಪ್ರತಿಭಟನೆ ಬಲವಾಗಿರುವ ಸಮಯದಲ್ಲಿ ಕಾಂಗ್ರೆಸ್‍ನ ರಾಲಿ ಪ್ರಾಮುಖ್ಯತೆ ಪಡೆದುಕೊಂಡಿದೆ.