ಪೌರತ್ವ ಮಸೂದೆ: ಭಾರತದ ಸ್ಥಿತಿಗತಿಗಳ ಮೇಲೆ ನಿಗಾ ಇಟ್ಟಿದ್ದೇವೆ; ವಿಶ್ವಸಂಸ್ಥೆ

0
1730

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ.14: ಪಾರ್ಲಿಮೆಂಟಿನ ಎರಡು ಸಭೆಗಳಲ್ಲಿ ಪಾಸಾದ ಭಾರತದ ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಸೂಕ್ಷ್ಮವಾಗಿ ನಿರೀಕ್ಷಿಸಲಾಗುತ್ತಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಕಾನೂನಿನ ನಂತರದ ಪರೀಣಾಮವನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದು ಅದು ಹೇಳಿದೆ.

ಇದಕ್ಕೆ ಸಂಬಂಧಿಸಿ ಮಾನವಹಕ್ಕು ಸಮಸ್ಯೆಗಳ ಕುರಿತು ಸಂಬಂಧಿಸಿದವರಿಗೆ ಆತಂಕವನ್ನು ತಿಳಿಸಲಾಗಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟಾನಿಯೊ ಗುಟರಸ್‍ರ ಡೆಪ್ಯುಟಿ ವಕ್ತಾರ ಫರಾಹಕ್ ಈ ಕುರಿತು ವಿವರ ನೀಡಿದರು. ಮಾನವಹಕ್ಕು ಅದರ ಆಧಾರ ತತ್ವಗಳನ್ನು ಎತ್ತಿ ಹಿಡಿಯಲಾಗುವುದು ಎಂದು ಅವರು ನಿರೀಕ್ಷೆ ವ್ಯಕ್ತಪಡಿಸಿದರು. ಮಸೂದೆ ಪಾಸಾದ ಬಳಿಕ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ವ್ಯಾಪಿಸುತ್ತಿದೆ ಎಂಬ ವಿವರ ಲಭಿಸಿದೆ. ಬಾಂಗ್ಲಾದೇಶ ಸಹಿತ ನೆರೆಯ ದೇಶಗಳು ಆತಂಕ ವ್ಯಕ್ತಪಡಿಸಿದ ಸನ್ನಿವೇಶದಲ್ಲಿ ವಿಶ್ವಸಂಸ್ಥೆ ಮಧ್ಯಪ್ರವೇಶಿಸಿದೆ.