ಆಫ್ರಿಕದಲ್ಲಿ ಆಹಾರ ಇಲ್ಲದೆ 94 ಲಕ್ಷ ಮಂದಿ ಭೀತಿಯಲ್ಲಿ

0
626

ಸನ್ಮಾರ್ಗ ವಾರ್ತೆ-

ಪ್ಯಾರಿಸ್, ಡಿ. 19: ಆಫ್ರಿಕ ಖಂಡದ ಹದಿನಾರು ದೇಶಗಳಲ್ಲಿ 94 ಲಕ್ಷ ಮಂದಿ ಆಹಾರವಿಲ್ಲದೆ ಕಷ್ಟ ಪಡುತ್ತಿದ್ದಾರೆಂದು ವಿಶ್ವಸಂಸ್ಥೆಯ ಅಧಿಕಾರಿಗಳು ತಿಳಿಸಿದರು. ಒಂದು ವರ್ಷದಲ್ಲಿ ಹಸಿದವರ ಸಂಖ್ಯೆ ದ್ವಿಗುಣವಾಯಿತೆಂದು ಅವರು ಹೇಳಿದ್ದಾರೆ. ಘರ್ಷಣೆಯ ಹೆಚ್ಚಳದಿಂದ ಈ ಅವಸ್ಥೆ ಬಂದೆರಗಿದೆ. ನೈಜರ್, ಬುರ್ಕಿನ ಫಾಸೊದಲ್ಲಿ ಹಸಿವು ದೊಡ್ಡ ಸಮಸ್ಯೆ ಆಗಿದೆ. ನೈಜೀರಿಯದಲ್ಲಿ 40 ಲಕ್ಷ ಮಂದಿ, ನೈಜರಿನಲ್ಲಿ 15 ಲಕ್ಷ ಮಂದಿ, ಬುಕಿನೊ ಫಾಸೊದಲ್ಲಿ 12 ಲಕ್ಷ ಮಂದಿ ಹಸಿವಿನಿಂದ ನರಳುತ್ತಿದ್ದಾರೆ. ಮಾಲಿ, ಬುರ್ಕಿನೊ ಫಾಸೊ, ನೈಜೀರಿಯದಲ್ಲಿ ಸುರಕ್ಷಿತತೆಗೆ ಭಾರೀ ಆತಂಕ ಬಂದೊದಗಿದೆ.

ಹಮಾನದ ಬದಲಾವಣೆಯು ಆಫ್ರಿಕದಲ್ಲಿ ಹಸಿವು ಹೆಚ್ಚಲು ಹೆಚ್ಚು ಕಾರಣವಾಯಿತು ಎಂದು ವಿಶ್ವಸಂಸ್ಥೆಯ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹೇಳುತ್ತಿದ್ದಾರೆ. ಈ ವಲಯದಲ್ಲಿ ಜನರ ಸಂಖ್ಯೆ ಬಹಳ ಹೆಚ್ಚಾಗಿದೆ. ಬುರ್ಕಿನೊ ಫಾಸೊದ ಗ್ರಾಮಗಳಲ್ಲಿ ಶಾಲೆ, ಆಸ್ಪತ್ರೆಗಳು ಮುಚ್ಚಿವೆ. ಜನರಿಗೆ ಮನೆಯಿಲ್ಲ ಎಂದು ಪ್ಯಾರಿಸಿನ ಅರ್ಗನೈಝೇಶನ್ ಫಾರ್ ಇಕಾನಾಮಿಕ್ ಕೊಆಪರೇಶನ್ ಆಂಡ್ ಡೆವಲಪ್‍ಮೆಂಟ್ ಆಫ್ರಿಕಾದ ಸಿಬ ಜಿನ್ ಸೌಥಿ ತಿಳಿಸಿದ್ದಾರೆ.