ಎನ್‍ ಡಿ ಎ ಮೈತ್ರಿ: ಅಕಾಲಿ ದಳದಿಂದ ಬಿಜೆಪಿಗೆ ಮುನ್ನೆಚ್ಚರಿಕೆ

0
1088

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ. 25: ಮಿತ್ರ ಪಕ್ಷಗಳ ಜೊತೆ ಬಿಜೆಪಿ ಸಂಬಂಧ ಚೆನ್ನಾಗಿಲ್ಲ ಮತ್ತು ಸಾಕಷ್ಟು ಪರಿಗಣನೆ ಇಲ್ಲ. ಆದ್ದರಿಂದ ಎನ್‍ಡಿಎಯ ಹೆಚ್ಚಿನ ಪಕ್ಷಗಳಲ್ಲಿ ಅತೃಪ್ತಿಯಿದೆ ಎಂದು ಶಿರೋಮಣಿ ಅಕಾಲಿದಳ ನಾಯಕ ನರೇಶ್ ಗುಜ್‍ರಾಲ್ ಹೇಳಿದರು. ಬಿಜೆಪಿ ಮರುಚಿಂತನೆ ನಡೆಸದಿದ್ದರೆ ಬಿಜೆಪಿಯನ್ನು ಕೇಂದ್ರದಲ್ಲಿ ಬೆಂಬಲಿಸುವುದನ್ನು ಮಿತ್ರ ಪಕ್ಷಗಳು ನಿಲ್ಲಿಸಲಿವೆ ಎಂದು ರಾಜ್ಯಸಭಾ ಸದಸ್ಯ ನರೇಶ್ ಗುಜ್‍ರಾಲ್ ಹೇಳಿದರು.

ಶಿರೋಮಣಿ ಅಕಾಲಿದಳವು ಎನ್ ಆರ್ ಸಿಯ ವಿರುದ್ಧವಿದೆ. ಪೌರತ್ವ ಕಾನೂನು ಪ್ರಕಾರ ಪೌರತ್ವಕ್ಕೆ ಮನವಿ ಸಲ್ಲಿಸುವವರಲ್ಲಿ ಮುಸ್ಲಿಮರನ್ನು ಕೂಡ ಸೇರಿಸಬೇಕೆಂದು ಅವರು ಆಗ್ರಹಿಸಿದರು. ಪೌರತ್ವ ತಿದ್ದುಪಡಿ ನಿಯಮದಂತಹ ಮುಖ್ಯ ವಿಷಯಗಳನ್ನು ಕೂಡ ಎನ್‍ಡಿಎಯಲ್ಲಿ ಚರ್ಚಿಸದ್ದು ದುರದೃಷ್ಟಕರವಾಗಿದೆ. ಆದ್ದರಿಂದ ಎನ್‍ಡಿಎಯ ಹಲವು ಮಿತ್ರ ಪಕ್ಷಗಳಲ್ಲಿ ಅಸಂತೃಪ್ತಿಯಿದೆ. ಈಗ ಬಿಜೆಪಿಗೆ ವಾಜಪೇಯಿ ಸ್ಪರ್ಶ ಬೇಕಾಗಿದೆ. ಅವರು 20 ಪಾರ್ಟಿಗಳ ಸಖ್ಯ ಕೂಟದ ನೇತೃತ್ವ ವಹಿಸಿದ್ದರು. ಸಾಕಷ್ಟು ಗೌರವ ನೀಡಿದ್ದರು. ವಾಜಪೇಯಿ ಎಲ್ಲರಿಗೂ ಬಾಗಿಲು ತೆರೆದಿದ್ದವು. ಎಲ್ಲರಿಗೂ ಸಮಾನ ಪರಿಗಣನೆ ನೀಡಿದ್ದರು. ಎಲ್ಲ ವಿಷಯಗಳಲ್ಲಿ ಚರ್ಚೆ ನಡೆದಿತ್ತು. ವಾಜಪೇಯಿ ಗುಣ ಅರುಣ್ ಜೈಟ್ಲಿಯಲ್ಲೂ ಇತ್ತು. ಯಾವ ವಿಷಯದಲ್ಲಿಯೂ ಅವರನ್ನು ಭೇಟಿಯಾಗಬಹುದಿತ್ತು. ಆದರೆ ಅವರ ನಿಧನಾನಂತರ ಅಂತಹ ಬಾಗಿಲುಗಳನ್ನು ಬಿಜೆಪಿ ಮುಚ್ಚಿದೆ ಎಂದು ಟಿವಿ ಸಂದರ್ಶನದಲ್ಲಿ ಹೇಳಿದರು.