ಛತ್ತಿಸ್ ಗಡ ನಗರಸಭೆಯಲ್ಲಿ ಕಾಂಗ್ರೆಸ್ ಮುನ್ನಡೆ

0
2148

ಸನ್ಮಾರ್ಗ ವಾರ್ತೆ-

ರಾಯ್‍ಪುರ, ಡಿ. 25: ಛತ್ತೀಸ್‍ಗಡ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಗಳಿಸಿದೆ. 151 ನಗರ ಸಭಾ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ 2032 ವಾರ್ಡುಗಳಲ್ಲಿ ಕಾಂಗ್ರೆಸ್ 923 ಸ್ಥಾನಗಳಲ್ಲಿ ಜಯಿಸಿದೆ. ಬಿಜೆಪಿ 814 ವಾರ್ಡ್‍ಗಳಲ್ಲಿ ಗೆದ್ದು ಎರಡನೆ ಸ್ಥಾನದಲ್ಲಿದೆ. ಅಜಿತ್ ಜೋಗಿಯ ಜನತಾ ಕಾಂಗ್ರೆಸ್ 17 ಸ್ಥಾನ ಗಳಿಸಿದೆ. ಪಕ್ಷೇತರರು 278 ವಾರ್ಡ್‍ಗಳು ಜಯಗಳಿಸಿದರು.

10 ಮುನ್ಸಿಪಲ್ ಕಾರ್ಪೊರೇಷನ್‍ಗಳಲ್ಲಿ, 38 ಮುನ್ಸಿಪಲ್ ಕೌನ್ಸಿಲ್‍ಗಳಲ್ಲಿ, 103 ನಗರ ಪಂಚಾಯತ್‍ಗಳಲ್ಲಿ ಚುನಾವಣೆ ನಡೆದಿದೆ. ಒಟ್ಟು 2831 ವಾರ್ಡ್‍ಗಳಿಗೆ ಚುನಾವಣೆ ನಡೆಯಿತು.