ನಾಗರಿಕ ತಿದ್ದಪಡಿ ಕಾನೂನಿನ ಪ್ರತಿಯನ್ನು ವೇದಿಕೆಯಲ್ಲೇ ಹರಿದು ಇಂಕ್ವಿಲಾಬ್ ಜಿಂದಾಬಾದ್ ಘೋಷಣೆ ಕೂಗಿದ ವಿದ್ಯಾರ್ಥಿನಿ; ವಿಡಿಯೋ

0
1465

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ. 25: ಪಶ್ಚಿಮ ಬಂಗಾಳದ ಯಾದವಪುರ ವಿಶ್ವವಿದ್ಯಾನಿಯಲದಲ್ಲಿ ವಿದ್ಯಾರ್ಥಿನಿಯೊಬ್ಬಳು ಪದವಿ ಪ್ರಧಾನ ಸಮಾರಂಭದಲ್ಲಿ ಪದವಿ ಸ್ವೀಕರಿಸುವ ವೇಳೆ ನಾಗರಿಕ ತಿದ್ದುಪಡಿ ಕಾನೂನಿನ ಪ್ರತಿಯನ್ನು ಹರಿದು ವಿರೋಧ ವ್ಯಕ್ತಪಡಿಸಿದ್ದಾಳೆ. ಇದು ಈ ಕಾನೂನನ್ನು ವಿರೋಧಿಸುವ ರೀತಿಯಾಗಿದೆ ಎಂದು ಚಿನ್ನದ ಪದಕ ವಿಜೇತೆಯಾದ ದೆಬೊಸ್ಮಿತಾ ಚೌಧರಿ ಹೇಳಿದ್ದಾಳೆ.

ಇಡೀ ಘಟನೆಯ ವೀಡಿಯೊ ಬಹಿರಂಗವಾಗಿದ್ದು ಪೌರತ್ವ ಕಾನೂನಿನ ಪ್ರತಿಯನ್ನು ಹರಿದು, ನಾವು ದಾಖಲೆ ತೋರಿಸಲಾರೆವು, ಇಂಕ್ವಿಲಾಬ್ ಜಿಂದಾಬಾದ್ ಎಂದು ಕೂಗಿದ್ದಾಳೆ. ನಿಜವಾದ ನಾಗರಿಕರಲ್ಲೂ ತಮ್ಮ ನಾಗರಿಕತೆಯನ್ನು ಸಾಬೀತು ಪಡಿಸಲು ಈ ಕಾನೂನು ಹೇಳುತ್ತಿದೆ. ಆದ್ದರಿಂದ ತಾನು ಈ ಕಾನೂನನ್ನು ವಿರೊಧಿಸುತ್ತಿದ್ದೇನೆ ಎಂದು ಆಕೆ ಹೇಳಿದ್ದಾರೆ.

ಪದವಿ ಪ್ರದಾನ ಸಮಾರಂಭದಲ್ಲಿ ಕುಲಪತಿ, ಉಪಕುಲಪತಿ, ರಿಜಿಸ್ಟ್ರಾರ್ ಇದ್ದರು. ಯಾರಿಗೂ ಶಂಕೆ ಬೇಡ, ತಾನು ಯಾದವಪುರ ವಿಶ್ವವಿದ್ಯಾನಿಲಯದ ಕುರಿತು ಅಗೌರವ ತೋರಿಸಿಲ್ಲ. ಈ ತನ್ನ ಪ್ರೀತಿಯ ಸಂಸ್ಥೆಯಿಂದ ಪದವಿ ಪಡೆಯಲು ಹೆಮ್ಮೆಯಿದೆ. ಆದರೆ ನಾನು ಪೌರತ್ವ ಕಾನೂನನ್ನು ವಿರೋಧಿಸುತ್ತಿದ್ದೇನೆ. ಅದಕ್ಕಾಗಿ ಈ ವೇದಿಕೆಯನ್ನು ಅಯ್ಕೆಮಾಡಿಕೊಂಡೆ ಎಂದು ದೆಬೊಸ್ಮತಾ ಹೇಳಿದರು.

ಆಕೆಯ ಗೆಳೆಯರು ಕುಲಪತಿಯಿಂದ ಡಿಗ್ರಿ ಪಡೆಯಲು ನಿರಾಕರಿಸಿದ್ದಾರೆ. ಅಕ್ರೊಪ್ರೊಭೋ ದಾಸ್ ಮತ್ತು ಅವರ 25 ಸಹಪಾಠಿಗಳು ಪದವಿ ಸ್ವೀಕರಿಸಲು ವೇದಿಕೆಗೆ ಬಂದಿಲ್ಲ. ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್‍ ರನ್ನು ವಿಶ್ವವಿದ್ಯಾಲಯ ಪ್ರವೇಶಿಸದಂತೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ತಡೆದಿದ್ದರು.