ಡಿಟೆನ್ಶನ್ ಸೆಂಟರ್: ಆರೆಸ್ಸೆಸ್ ಪ್ರಧಾನಿ ಭಾರತ ಮಾತೆಗೆ ಸುಳ್ಳು ಹೇಳುತ್ತಿದ್ದಾರೆ- ರಾಹುಲ್ ಗಾಂಧಿ

0
715

ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಡಿ. 26: ದೇಶದಲ್ಲಿ ನಾಗರಿಕ ತಿದ್ದುಪಡಿ ಕಾನೂನು (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್ ಸಿ) ಜೊತೆಗೆ ಡಿಟೆನ್ಶನ್ ಸೆಂಟರ್ ಕುರಿತು ಚರ್ಚೆ ನಡೆಯುತ್ತಿದೆ. ನುಸುಳುಕೋರರನ್ನು ಗುರುತಿಸಿದ ಬಳಿಕ ಡಿಟೆನ್ಶನ್ ಸೆಂಟರ್ ನಲ್ಲಿರಿಸಲಾಗುವುದು ಎನ್ನಲಾಗುತ್ತಿದೆ. ಈ ವಿಷಯವನ್ನು ಎತ್ತಿಕೊಂಡು ರಾಹುಲ್ ಗಾಂಧಿ ಪ್ರಧಾನಿ ಮೋದಿಯನ್ನು ಕಟುವಾಗಿ ಟೀಕಿಸಿದರು.
ರಾಹುಲ್ ಗಾಂಧಿ ಮೋದಿಯನ್ನು ಆರೆಸ್ಸೆಸ್ಸಿನ ಪ್ರಧಾನಿ ಎಂದು ಸಂಬೋಧಿಸಿದ್ದು ಪ್ರಧಾನಿ ಭಾರತ ಮಾತೆಯೊಂದಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಟ್ವೀಟ್ ಮಾಡಿದರು. ಅವರು ಜೊತೆಯಲ್ಲಿ ಒಂದು ವೀಡಿಯೊವನ್ನು ಕೂಡ ಶೇರ್ ಮಾಡಿದ್ದಾರೆ. ಅದರಲ್ಲಿ ಮೋದಿಯವರು- ಸಿಎಎ, ಎನ್‍ಆರ್ ಸಿ ಕುರಿತು ಮುಸ್ಲಿಮರನ್ನು ದೇಶದಲ್ಲಿ ದಾರಿ ತಪ್ಪಿಸಲಾಗಿದೆ, ಜನರಲ್ಲಿ ವದಂತಿ ಹರಡಲಾಗುತ್ತಿದೆ, ದೇಶದ ಮುಸ್ಲಿಮರನ್ನು ಡಿಟೆನ್ಶನ್ ಸೆಂಟರ್ ನಲ್ಲಿ ಇರಿಸಲಾಗುತ್ತಿದೆ, ಇವೆಲ್ಲ ಸುಳ್ಳು ಎಂದು ಮೋದಿ ಹೇಳುತ್ತಾರೆ.
ರಾಹುಲ್ ಇದೇ ವಿಷಯವನ್ನು ಎತ್ತಿಕೊಂಡು ಮೋದಿಯನ್ನು ಟೀಕಿಸಿ ದೇಶದೊಂದಿಗೆ ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂದು ಟ್ವೀಟ್‍ನಲ್ಲಿ ಆರೋಪಿಸಿದ್ದಾರೆ. ಡಿಟೆನ್ಶನ್ ಸೆಂಟರ್ ಅಕ್ರಮ ವಲಸಿಗರನ್ನು ಇರಿಸುವ ಕೇಂದ್ರವಾಗಿದ್ದು ಇವರನ್ನು ಟ್ರಿಬ್ಯೂನಲ್ ಕೋರ್ಟು ವಿದೇಶಿ ಎಂದು ಘೋಷಿಸಿರುತ್ತದೆ. ಇಲ್ಲಿ ಇಂತಹವರನ್ನು ಇರಿಸಲಾಗುತ್ತದೆ, ಯಾವುದೇ ಅಪರಾಧಕ್ಕೆ ಶಿಕ್ಷೆಗೊಳಗಾದವರು ಮತ್ತು ತಮ್ಮ ದೇಶಕ್ಕೆ ಹೋಗಬೇಕಾದವರು ಅಲ್ಲಿರುತ್ತಾರೆ. 1946ರ ಸೆಕ್ಶನ್ 3(2)(ಸಿ)ಯಂತೆ ಕೇಂದ್ರ ಸರಕಾರಕ್ಕೆ ಈ ರೀತಿ ಮಾಡುವ ಅಧಿಕಾರ ಇದೆ.