ಎನ್ ಆರ್ ಪಿಗೆ ವಿಳಾಸ ಕೇಳಿದರೆ ಪ್ರಧಾನ ಮಂತ್ರಿಯ ವಿಳಾಸ ಕೊಡಿ- ಆರುಂಧತಿ ರಾಯ್

0
1194

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ. 26: ರಾಷ್ಟ್ರೀಯ ಜನಸಂಖ್ಯೆ ನೋಂದಣಿಗಾಗಿ (ಎನ್‍ಪಿಆರ್) ಮನೆಗೆ ಬರುವ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡಬೇಡಿ ಎಂದು ಸಾಮಾಜಿಕ ಕಾರ್ಯಕರ್ತೆ ಆರುಂಧತಿ ರಾಯ್ ಹೇಳಿದರು. ಹೆಸರು ಕೇಳಿದರೆ ಕುಪ್ರಸಿದ್ಧ ಕ್ರಿಮಿನಲ್‍ಗಳಾದ ರಂಗಾ ಬಿಲ್ಲಾ ಎಂದೂ, ಕೂಪ್ಗುಂ-ಕಟ್ಟ ಎಂದೂ ಹೆಸರು ಹೇಳಿರಿ. ವಿಳಾಸ ಕೇಳಿದರೆ ಪ್ರಧಾನಿಯ ವಸತಿಯ ವಿಳಾಸವಾದ ರೇಸ್ ಕೋರ್ಸ್ ಏಳು ಎಂದು ವಿಳಾಸ ನೀಡಿರಿ. ಎಲ್ಲರೂ ಒಂದು ಮೊಬೈಲ್ ನಂಬರ್ ಕೊಟ್ಟರೆ ಸಾಕು ಎಂದು ಆರುಂಧತಿರಾಯ್ ಹೇಳಿದರು. ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಮತ್ತು ರಾಷ್ಟ್ರೀಯ ಪೌರತ್ವ ಪಟ್ಟಿಯ ವಿರುದ್ಧ ದಿಲ್ಲಿಯ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಅವರು ಮಾತಾಡಿದ್ದರು.

ಎನ್‍ಪಿಆರ್ ಅನ್ನು ಎನ್‍ಸಿಆರ್ ಜಾರಿಗೊಳಿಸಲು ಬಳಸಲಾಗುತ್ತದೆ. ಅದನ್ನು ಎದುರಿಸಲು ಸರಿಯಾದ ಯೋಜನೆಯ ಅಗತ್ಯವಿದೆ. ಇದನ್ನು ವಿಫಲಗೊಳಿಸಬೇಕಾಗಿದೆ. ಲಾಠಿ ಮತ್ತು ಗುಂಡಿಗೆ ಎದೆಯೊಡ್ಡಲು ಮಾತ್ರ ನಾವು ಜನಿಸಿಲ್ಲ. ಭಾರತದ ಮುಸ್ಲಿಮರನ್ನು ರಾಷ್ಟ್ರೀಯ ಪೌರತ್ವ ಪಟ್ಟಿಯ ಮೂಲಕ ಗುರಿ ಮಾಡಲಾಗಿದೆ. ದಲಿತರು ಮತ್ತು ಆದಿವಾಸಿಗಳು ಮತ್ತು ಬಡವರು ಇದರ ಬಲಿಪಶುಗಳಾಗಲಿದ್ದಾರೆ ಎಂದು ಆರುಂಧತಿ ಹೇಳಿದರು. ತಾನು ಸುಳ್ಳು ಹೇಳುತ್ತಿದ್ದೇನೆಂದು ಮೋದಿಗೆ ಗೊತ್ತಿದೆ. ಅದರಲ್ಲಿ ಸಿಕ್ಕಿ ಬೀಳುವೆ ಎಂದು ಅವರಿಗೆ ಚೆನ್ನಾಗಿ ಗೊತ್ತಿದೆ. ಇಲ್ಲಿನ ಮಾಧ್ಯಮಗಳು ಅವರನ್ನು ಪ್ರಶ್ನಿಸುವುದಿಲ್ಲ ಎನ್ನುವುದು ಸುಳ್ಳು ಹೇಳಲು ಅವರಿಗೆ ಧೈರ್ಯ ಬಂದಿದೆ. ಸಿಐಎ, ಎನ್‍ಆರ್ ಸಿ ದೇಶಾದ್ಯಂತ ವಿರೋಧವನ್ನು ಎದುರಿಸುತ್ತಿರುವುದರಿಂದ ಎನ್‍ಪಿಆರ್ ಯೋಜನೆಯ ಜಾರಿಗೆ ಕೇಂದ್ರ ಸರಕಾರ ಶ್ರಮಿಸುತ್ತಿದೆ ಎಂದವರು ಹೇಳಿದ್ದಾರೆ.