ನಿರಪರಾಧಿಗಳನ್ನು ಬಂಧಿಸುವುದಿಲ್ಲ; ಪರಿಸ್ಥಿತಿ ನಿಯಂತ್ರಣದಲ್ಲಿ- ಯು ಪಿ ಡಿಜಿಪಿ

0
486

ಸನ್ಮಾರ್ಗ ವಾರ್ತೆ-

ಲಕ್ನೊ, ಡಿ. 27: ಉತ್ತರ ಪ್ರದೇಶದಲ್ಲಿ ಕಾನೂನು ವ್ಯವಸ್ಥೆ ನಿಯಂತ್ರಣದಲ್ಲಿದೆ ಎಂದು ಡಿಜಿಪಿ ಒ.ಪಿ. ಸಿಂಗ್ ಹೇಳಿದ್ದಾರೆ. ಪ್ರಕರಣ ತನಿಖೆಗೆ ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ. 21 ಜಿಲ್ಲೆಗಳಲ್ಲಿ ಇಂಟರ್ ನೆಟ್ ಸೇವೆಯನ್ನು ನಿಷೇಧಿಸಲಾಗಿದ್ದು ಪರಿಸ್ಥಿತಿಯಲ್ಲಿ ಸುಧಾರಣೆಯಾಗಿದೆ ಎಂದು ಡಿಜಿಪಿ ಹೇಳಿದರು.

ನಿರಪರಾಧಿಗಳ ವಿರುದ್ಧ ಪೊಲೀಸರು ಕ್ರಮ ಸ್ವೀಕರಿಸುವುದಿಲ್ಲ. ಆದರೆ ಹಿಂಸಾಚಾರದಲ್ಲಿ ತೊಡಗಿದವರನ್ನು ಸುಮ್ಮನೆ ಬಿಟ್ಟುಬಿಡುವುದಿಲ್ಲ. ಪಾಪ್ಯುಲರ್ ಫ್ರಂಟ ಆಫ್ ಇಂಡಿಯ ಸಹಿತ ಹಲವು ಸಂಘಟನೆಗಳ ಸದಸ್ಯರು ಅಕ್ರಮದಲ್ಲಿ ಶಾಮಿಲಾಗಿದ್ದಕ್ಕೆ ಬಂದಿಸಲಾಗಿದೆ ಎಂದು ಒಪಿ ಸಿಂಗ್ ಹೇಳಿದರು.

ಇದೇವೇಳೆ, ಉತ್ತರಪ್ರದೇಶದ ಪೊಲೀಸರ ಕ್ರೌರ್ಯಗಳನ್ನು ವಿವರಿಸುವ ವಿವಿಧ ವರದಿಗಳು ಬಹಿರಂಗವಾಗಿವೆ. ಮಕ್ಕಳ ಸಹಿತ ಉತ್ತರಪ್ರದೇಶ ಪೊಲೀಸರು ಅಕಾರಣವಾಗಿ ಹೊಡೆದಿರುವ ಸುದ್ದಿಗಳು ಬಂದಿವೆ. ಅಪ್ರಾಪ್ತ ವಯಸ್ಕರಲ್ಲಿ ಹಲವಾರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.