ಮಕ್ಕಳ ದಿನಾಚರಣೆಯನ್ನು ನೆಹರೂ ಜನ್ಮದಿನವಾದ ನ. 14ರ ಬದಲು ಡಿ. 26ಕ್ಕೆ ನಿಗದಿಪಡಿಸಿ: ಪತ್ರ ಬರೆದ ಮನೋಜ್ ತಿವಾರಿ

0
653

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ. 27: ಮಾಜಿ ಪ್ರಧಾನಿ ಜವಹರ್ ಲಾಲ್ ನೆಹ್ರೂ ಜನ್ಮದಿನವಾದ ನವೆಂಬರ್ 14ನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗತ್ತಿದೆ. ದಿಲ್ಲಿ ಬಿಜೆಪಿ ಅಧ್ಯಕ್ಷ ಹಾಗೂ ಲೋಕಸಭಾ ಸದಸ್ಯ ಸಿನೆಮಾ ನಟ ಮನೋಜ್ ತಿವಾರಿ ಪ್ರಧಾನಿ ನರೇಂದ್ರ ಮೋದಿಗೆ ಅದನ್ನು ಡಿಸೆಂಬರ್ 26ಕ್ಕೆ ಬದಲಾಯಿಸಲು ಪತ್ರ ಬರೆದಿದ್ದಾರೆ.

ಹತ್ತನೆ ಸಿಖ್ ಗುರು ಗುರುಗೋವಿಂದ್ ಸಿಂಗ್‍ ರಿಗೆ ಆದರ ಸೂಚಕವಾಗಿ ಡಿಸೆಂಬರ್ 26ಕ್ಕೆ ಮಕ್ಕಳ ದಿನಾಚರಣೆ ಮಾಡಬೇಕೆಂದು ತಿವಾರಿ ವಾದಿಸಿದ್ದಾರೆ. ತ್ಯಾಗ ಸಹಿಸಿ ಹಲವು ಮಕ್ಕಳು ಭಾರತದಲ್ಲಿದ್ದಾರೆ. ಆದರೆ, ಅವರಲ್ಲಿ ಅತ್ಯಂತ ಮಹತ್ತರ ತ್ಯಾಗವನ್ನು ಗುರುಗೋವಿಂದ್ ಸಿಂಗ್‍ರ ಪುತ್ರರಾದ ಸಾಹಿಝಾದೆ ಒರಾವರ್ ಸಿಂಗ್ , ಸಾಹಿಬ್ ಝಾದೆ ಫತೇಹ್ ಸಿಂಗ್ ಆಗಿದ್ದಾರೆ. ಧರ್ಮ ಸಂರಕ್ಷಿಸಲು ಪಂಜಾಬಿನ ಸರ್‍ಹಿಂದ್‍ನಲ್ಲಿ ಅವರು ಜೀವ ಬಲಿದಾನ ನೀಡಿದ್ದು 1705 ಡಿಸೆಂಬರ್ 26ಕ್ಕೆ ಆಗಿದೆ.

ಇತರ ಮಕ್ಕಳಿಗೆ ಪ್ರೇರಣೆಯಾಗಲು ಈ ಇಬ್ಬರು ಹುತಾತ್ಮರಾದ ದಿನವನ್ನು ಮಕ್ಕಳ ದಿನಾಚಣೆ ಆಚರಿಸಬೇಕು. ಅದು ನಮ್ಮ ಮಕ್ಕಳಲ್ಲಿ ಅಭಿಮಾನ ಸೃಷ್ಟಿಸುತ್ತದೆ. ಅವರ ಆತ್ಮವಿಶ್ವಾಸ ಹೆಚ್ಚಲು ಇದು ಕಾರಣವಾಗಬಹುದು. ಸಿಖ್ ಸಮುದಾಯ ನಿರ್ಣಾಯವಾಗಿರುವ ದಿಲ್ಲಿಯ ವಿಧಾನಸಭೆ ಚುನಾವಣೆಯನ್ನು ಮುಂದಿಟ್ಟು ಮನೋಜ್ ತಿವಾರಿ ಈ ಪತ್ರ ಬರೆದಿದ್ದಾರೆ ಎನ್ನಲಾಗುತ್ತಿದೆ.