ಚಿಲಿಯಲ್ಲಿ ಕಾಡ್ಗಿಚ್ಚು; 200ಕ್ಕೂ ಹೆಚ್ಚು ಮನೆಗಳು ಭಸ್ಮ

0
381

ಸನ್ಮಾರ್ಗ ವಾರ್ತೆ-
ವಾಲ್ವರೆಸೊ, ಡಿ.27: ಚಿಲಿಯ ಪ್ರವಾಸಿ ನಗರ ವಾವರೆಸೊದಲ್ಲಿ ಕಾಡ್ಗಿಚ್ಚಿನಿಂದಾಗಿ 150 ಮನೆಗೆ ಭಸ್ಮವಾಗಿದೆ. 445 ಎಕರೆ ಪ್ರದೇಶ ಬೆಂಕಿಗಾಹುತಿಯಾಯಿತು. ರೊಕುವಂಟ್, ಸಾನ್‍ರೋಕಿ ಪರ್ವತಗಳಿಗೆ ಹರಡಿದ್ದು ಬಡವರು ವಾಸಿಸುವ ಪ್ರದೇಶವನ್ನು ಬೆಂಕಿಯ ಕೆನ್ನಾಲಿಗೆ ಆಹುತಿ ಪಡೆದಿದೆ. ಸಾವಿರಾರು ಮಂದಿಯನ್ನು ಅವರ ಮನೆಗಳಿಂದ ತೆರವುಗೊಳಿಸಲಾಗಿದೆ. ಕ್ರಿಸ್ಮಸ್ ದಿನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಇನ್ನೂ ಆರಿಹೋಗಿಲ್ಲ.

ತೀರ ಉಷ್ಣ ಮತ್ತು ಗಾಳಿ ಬೆಂಕಿ ಹರಡಲು ಕಾರಣವಾಗಿದ್ದು ಅಗ್ನಿಶಾಮಕ ದಳದ ನೇತೃತ್ವದಲ್ಲಿ ರಕ್ಷಣಾಕಾರ್ಯ ನಡೆದರು. ಬಿರುಸಿನಿಂದ ಬೆಂಕಿ ಹರಡಿದ್ದು ಅವರಿಗೆ ದೊಡ್ಡ ಸಮಸ್ಯೆ ತಂದೊಡ್ಡಿದೆ. ಸಾವಿರಾರು ಮಂದಿಯಿಂದ ಬೆಂಕಿ ಹಿಡಿದ ಪ್ರದೇಶದಿಂದ ದೂರಕ್ಕೆ ಕರೆದೊಯ್ಯಲಾಗಿದೆ. 90,000 ಬಳಕೆದಾರರ ವಿದ್ಯುತ್ ಸಂಪರ್ಕಕ್ಕೆ ಅಡ್ಡಿಯಾಗಿದ್ದು, ರಕ್ಷಣಾ ಕಾರ್ಯ ವೈಮಾನಿಕ ಮಾರ್ಗದಲ್ಲಿ ಕೂಡ ನಡೆಯುತ್ತಿದೆ. ಆದರೆ ಯಾರೋ ಉದ್ದೇಶ ಪೂರ್ವಕ ಬೆಂಕಿ ಹಚ್ಚಿದರೆಂದು ಚಿಲಿ ಗೃಹಸಚಿವ ಗೋನ್ ಸಾಲೊ ಬ್ಲೂಮೆನ್ ಹೇಳಿದರು. ಕಾಡಿನಲ್ಲಿ ಬೆಂಕಿ ಆರಂಭವಾಯಿತು. ಸಮೀಪದಲ್ಲಿ ನಿಲ್ಲಿಸಿದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬಂದಿವೆ. ತನಿಖೆಯನ್ನು ಸರಕಾರ ನಡೆಸುತ್ತಿದೆ.