ಸನ್ಮಾರ್ಗ ವಾರ್ತೆ-
ಲಕ್ನೊ, ಡಿ. 28: ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಪ್ರತಿಭಟನೆಯಲ್ಲಿ ಉತ್ತರ ಪ್ರದೇಶದಲ್ಲಿ ಪೊಲೀಸ್ ಗುಂಡಿನಿಂದ ಒಬ್ಬರು ಮಾತ್ರ ಮೃತಪಟ್ಟಿದ್ದಾರೆ. ಉಳಿದೆಲ್ಲ ಹತ್ತೊಂಬತ್ತು ಮಂದಿ ಪ್ರತಿಭಟನಾ ಕಾರರ ಕೈಯಲ್ಲಿದ್ದ ಆಯುಧದಿಂದ ಮೃತಪಟ್ಟಿದ್ದಾರೆ ಎಂದು ಉತ್ತರಪ್ರದೇಶ ಡಿಜಿಪಿ ಒ.ಪಿ. ಸಿಂಗ್ ಹೇಳಿದ್ದಾರೆ.
ಸಿಎಎ ಹೋರಾಟವು ಘರ್ಷಣೆಯ ರೂಪ ಪಡೆದ ಬಿಜ್ನೋರಿನಲ್ಲಿ ಒಬ್ಬ ಕಾನ್ಸಟೇಬಲ್ ಸ್ವರಕ್ಷಣಾರ್ಥ ಜನರ ಮೇಲೆ ಗುಂಡು ಹಾರಿಸಿದ್ದು ಒಬ್ಬರು ಮೃತಪಟ್ಟರು. ಪ್ರತಿಭಟನಾಕಾರರು ಪೊಲೀಸರ ಮೇಲೆ ಗುಂಡು ಹಾರಿಸಿದರು. ಆ ಪೊಲೀಸ್ ಕಾನ್ಸಟೇಬಲ್ ಕೈಗೆ ಗಾಯವಾಗಿದೆ. ಉಳಿದ ಹತ್ತೊಂಬತ್ತು ಮಂದಿ ಪ್ರತಿಭಟನಾಕಾರರು ಅನಧಿಕೃತವಾಗಿ ಕೈಯಲ್ಲಿರಿಸಿದ್ದ ಆಯುಧದ ಮೂಲಕ ಗುಂಡು ಹಾರಿಸಿರಬಹುದು ಎಂದು ಯುಪಿಯಲ್ಲಿ ಗೋಲಿಬಾರಿನಲ್ಲಿ ಎಷ್ಟು ಮಂದಿ ಕೊಲ್ಲಲ್ಪಟ್ಟಿದ್ದಾರೆ ಎನ್ನುವ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.
ಕೊಲೆಯಾದವರ ಮೃತದೇಹದಲ್ಲಿ ಗಾಯಗಳನ್ನು ಪರಿಶೀಲಿಸಿ ಅವು ಪ್ರತಿಭಟನಾಕಾರರ ಕೈಯಲ್ಲಿದ್ದ ಅನಧಿಕೃತ ಆಯುಧಗಳಿಂದ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಎಷ್ಟು ಮಂದಿ ಪೊಲೀಸ್ ಗುಂಡಿಗೆ ಬಲಿಯಾದರು ಎಂಬ ಪ್ರಶ್ನೆಗೆ ಬಿಜ್ನೋರ್, ಕಾನ್ಪುರದಲ್ಲಿ ಮ್ಯಾಜಿಸ್ಟ್ರೇಟ್ ಅನುಮತಿಯೊಂದಿಗೆ ಪೊಲೀಸರು ಆಕಾಶಕ್ಕೆ ಗುಂಡು ಹಾರಿಸಿದರು. ಅಶ್ರುವಾಯು, ಲಾಠಿಚಾರ್ಜು ಮಾಡಿ ಪ್ರತಿಭಟನಾಕಾರರನ್ನು ಚದುರಿಸಿದರೆಂದು ಅವರು ಉತ್ತರಿಸಿದರು.












