ಪೌರತ್ವ ಕಾನೂನು: ಕೇರಳ ರಾಜ್ಯಪಾಲರ ವಿರುದ್ಧ ಪ್ರತಿಭಟನೆ; ಭಾಷಣ ಅರ್ಧದಲ್ಲಿಯೇ ನಿಲ್ಲಿಸಿದ ಆರಿಫ್ ಮುಹಮ್ಮದ್ ಖಾನ್

0
995

ಸನ್ಮಾರ್ಗ ವಾರ್ತೆ-

ಕಣ್ಣೂರ್, ಡಿ. 28: ಪೌರತ್ವ ತಿದ್ದುಪಡಿ ಕಾನೂನಿನ ವಿಷಯದಲ್ಲಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ವಿರುದ್ಧ ಕಣ್ಣೂರಿನಲ್ಲಿ ತೀವ್ರ ಪ್ರತಿಭಟನೆ ನಡೆದಿದ್ದು ಕಣ್ಣೂರಿನ ವಿಶ್ವವಿದ್ಯಾನಿಲಯದ ಇತಿಹಾಸ ಕಾಂಗ್ರೆಸ್ ಉದ್ಘಾಟನೆಗೆ ಬಂದ ರಾಜ್ಯಪಾಲರು ಭಾಷಣ ಮೊಟಕುಗೊಳಿಸಿ ಮರಳಿ ಹೋಗಬೇಕಾಯಿತು. ಇತಿಹಾಸ ಕಾಂಗ್ರೆಸ್‍ಗೆ ಬಂದ ಪ್ರತಿನಿಧಿಗಳಿಂದ ರಾಜ್ಯಪಾಲರು ಪ್ರತಿಭಟನೆ ಎದುರಿಸಬೇಕಾಯಿತು.