ಸಂತ್ರಸ್ತೆಯ ಸಂಬಂಧಿಕರಿಂದ ಅತ್ಯಾಚಾರ ಪ್ರಕರಣದ ಆರೋಪಿಯ ಕೊಲೆ: ಧಾರಾವಾಡದಲ್ಲಿ ನಡೆದ ಘಟನೆ

0
676

ಸನ್ಮಾರ್ಗ ವಾರ್ತೆ

ಬೆಂಗಳೂರು, ಡಿ. 31: ಹನ್ನೊಂದು ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಸಂತ್ರಸ್ತೆಯ ಸಂಬಂಧಿಕರೇ ಇರಿದು ಕೊಲೆ ಮಾಡಿದ ಘಟನೆ ರಾಜ್ಯದ ಧಾರಾವಾಡದಲ್ಲಿ ನಡೆದಿದೆ. ಇಲ್ಲಿನ ನಾವಲ್ ಗುಂಡಿಯ ಆಸ್ಪತ್ರೆಯಲ್ಲಿ ಆರೋಪಿ ಐವತ್ತೈದು ವರ್ಷದ ಹಕ್ ಸಾಬ್ ನಧಾಫ್‍ ನನ್ನು ಕೊಲೆ ಮಾಡಲಾಗಿದೆ. ಈತನೂ ಬಾಲಕಿಯ ಸಂಬಂಧಿಕನೇ ಆಗಿದ್ದಾನೆ. ಶುಕ್ರವಾರ ಹಕ್ ಸಾಬ್ ಹನ್ನೊಂದು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ್ದ. ನಂತರ ಬಾಲಕಿಯ ತಂದೆ ತಾಯಿ ಸಂಬಂಧಿಕರು ಹಕ್ಕುಸಾಬ್‍ನನ್ನು ಹಿಡಿದು ಕಟ್ಟಿಹಾಕಿ ಹೊಡೆದು ಪೊಲೀಸರ ವಶಕ್ಕೊಪ್ಪಿಸಿದ್ದರು. ಹೊಡೆತ ಬಿದ್ದು ಈತನ ಮುಖಕ್ಕೆ ಗಂಭೀರ ಗಾಯವಾಗಿತ್ತು.

ಹಕ್ಕ್ ಸಾಬ್‍ನನ್ನು ಪೊಲೀಸರು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಇದೇ ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೆ ತುತ್ತಾದ ಬಾಲಕಿಯನ್ನು ದಾಖಲಿಸಲಾಗಿತ್ತು. ಇದೇವೇಳೆ ಬಾಲಕಿಯ ಸಂಬಂಧಿಕ ಯುವಕ ಆಸ್ಪತ್ರೆಗೆ ಬಂದಿದ್ದ.. ಹಕ್ ಸಾಬ್ ಇದ್ದಲ್ಲಿಗೆ ಹೋಗಿ ಕಾವಲಿಗಿದ್ದ ಪೋಲಿಸರನ್ನು ದೂಡಿಹಾಕಿ ಕೈಯಲ್ಲಿದ್ದ ಚೂರಿಯಿಂದ ಹಲವು ಬಾರಿ ಇರಿದಿದ್ದಾನೆ. ಹಕ್ಕ್ ಸಾಬ್ ಮೃತಪಟ್ಟನೆಂದು ವರದಿಯಾಗಿದೆ.