ಉತ್ತರ ಪ್ರದೇಶದಲ್ಲಿ ಪೊಲೀಸ್ ದೌರ್ಜನ್ಯ: ಮುಸ್ಲಿಮರ ಮನೆಗಳ ಮೇಲೆ ದಾಂಧಲೆ- ವೀಡಿಯೊ

0
1492

ಸನ್ಮಾರ್ಗ ವಾರ್ತೆ

ಲಕ್ನೊ, ಡಿ. 31: ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಪ್ರತಿಭಟಿಸಿದವರ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ದೌರ್ಜನ್ಯ ನಡೆಸಿದ್ದು, ಮುಸ್ಲಿಮರನ್ನು ಮಾತ್ರ ಬೀದಿಯಲ್ಲಿ ಕ್ರೂರವಾಗಿ ಹೊಡೆಯುವುದು ಮತ್ತು ಅವರ ಮನೆಗಳಲ್ಲಿ ದಾಂಧಲೆ ಮಾಡುವುದು ನಡೆಯುತ್ತಿದೆ. ಇದರ ವೀಡಿಯೊ ದೃಶ್ಯಗಳನ್ನು ಮಾಧ್ಯಮಗಳು ಕೂಡ ಹೊರತಂದಿವೆ.

ಪ್ರತಿಭಟನೆಯನ್ನು ದಮನಿಸುವ ಉದ್ದೇಶದಿಂದ ಭೀತಿ ಹರಡುವ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. ಪ್ರತಿಭಟನಾಕಾರರ ವಿರುದ್ಧ ಬಲವಾದ ಕ್ರಮ ಜರಗಿಸಲಾಗುವುದು ಎಂಬ ಮುಖ್ಯಮಂತ್ರಿಯವರ ಘೋಷಣೆಯ ನಂತರ ದೌರ್ಜನ್ಯ ವ್ಯಾಪಿಸಿದೆ. ಇದೇವೇಳೆ, ಮುಝಪ್ಫರ್ ನಗರದಲ್ಲಿ ಪೊಲೀಸರು ಮಸೀದಿಗೆ ಹಾನಿ ಮಾಡಿದರು. ಇದರ ವೀಡಿಯೊ ಬಹಿರಂಗವಾಗಿದೆ. ಪ್ರತಿಭಟನೆ ನಡೆಯದ ಸ್ಥಳದಲ್ಲಿಯೂ ಪೊಲೀಸರ ದೌರ್ಜನ್ಯ ನಡೆದಿದೆ. ಮುಝಫ್ಫರ್ ನಗರದಲ್ಲಿ ಪೊಲೀಸರು ಕೋಮುಗಲಭೆಗೆ ಯತ್ನಿಸಿದ್ದಾರೆ ಎಂದು ಆರೋಪವೂ ಕೇಳಿ ಬಂದಿದೆ. ಮುಸ್ಲಿಂ ಗಲ್ಲಿಗಳಲ್ಲಿ ಆರ್ಥಿಕವಾಗಿ ಗಟ್ಟಿಯಾಗಿರುವವರ ಮನೆಗಳನ್ನು ಆಯ್ಕೆ ಮಾಡಿ ಪೊಲೀಸರಿಂದ ದೌರ್ಜನ್ಯ ನಡೆದಿದೆ.

ಮುಝಪ್ಫರ್ ನಗರದ ಮೀನಾಕ್ಷಿ ಚೌಕ್‍ನ ಮಸೀದಿಯೊಳಗೆ ಕಟ್ಟಿಗೆ ಹೊತ್ತಿ ಉರಿದ ಟಯರ್ ಗಳನ್ನು ಬಿಜೆಪಿ ಕಾರ್ಯಕರ್ತರು ಬಿಸಾಡಿದರೆಂದು ವರದಿಯಾಗಿದೆ. ಆದರೆ ಮಸೀದಿಗೆ ಬೆಂಕಿ ಹರಡಿಲ್ಲ. ಮೀನಾಕ್ಷಿ ಚೌಕ್‍ನಲ್ಲಿ ಹಲವು ಅಂಗಡಿಗಳನ್ನು ಬಿಜೆಪಿಯವರು ದರೋಡೆ ಮಾಡಿದ್ದು, ಪೊಲೀಸರು ನೋಡುತ್ತಿದ್ದುದು, ಮಹಿಳೆಯರು ಮಕ್ಕಳನ್ನೂ ಥಳಿಸಿದ್ದು, ಪುರುಷರು, ಮಕ್ಕಳು, ಮಹಿಳೆಯರ ಮುಂದೆ ಹೊಡೆದ ಘಟನೆಗಳು ನಡೆದಿವೆ. ಮನೆಯೊಳಗಿನ ಫರ್ನಿಚರ್, ಇತರ ಮನೆ ಸಲಕರಣೆಗಳನ್ನು ಪೊಲೀಸರು ನಾಶಪಡಿಸಿರುವುದಾಗಿ ಸಾಮಾಜಿಕ ಕಾರ್ಯಕರ್ತರು ಮಾಧ್ಯಮಗಳಿಗೆ ತಿಳಿಸಿದ್ದಾರೆ.