ಕೇರಳದಲ್ಲಿ ಡಿಟೆನ್ಶನ್ ಸೆಂಟರ್ ಇರುವುದಿಲ್ಲ- ಮುಖ್ಯಮಂತ್ರಿ ಪಿಣರಾಯಿ ವಿಜಯನ್

0
829

ಸನ್ಮಾರ್ಗ ವಾರ್ತೆ-

ತಿರುವನಂತಪುರಂ, ಡಿ. 31: ಪೌರತ್ವದಿಂದ ಹೊರಗಾಗುವವರನ್ನು ಇಡುವ ಡಿಟೆನ್ಶನ್ ಸೆಂಟರ್ ಕೇರಳದಲ್ಲಿ ಇರುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಅದಕ್ಕೆಯಾವ ಕ್ರಮಕ್ಕೂ ಸರಕಾರ ಮುಂದಾಗುವುದಿಲ್ಲ. ಪೌರತ್ವ ತಿದ್ದುಪಡಿ ಕಾನೂನು ರದ್ದುಪಡಿಸಿ ದೇಶದ ಜನರನ್ನು ಸಮಾನವಾಗಿ ನೋಡುವ ಸಂವಿಧಾನದ ದೃಷ್ಟಿಕೋನಕ್ಕೆ ತಯಾರಾಗಬೇಕು. ಪೌರತ್ವ ಪಟ್ಟಿಗೆ ಸಂಬಂಧಿಸಿ ಕೇರಳದ ನಡೆ ಇತಿಹಾಸದಲ್ಲಿ ಜಾಗ ಪಡೆಯಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಪೌರತ್ವ ತಿದ್ದುಪಡಿ ಕಾನೂನು ಸಹಿತ ವಿಷಯಗಳಲ್ಲಿ ಚರ್ಚಿಸಲು ಸೇರಿದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಅವರು ಮಾತಾಡಿದರು. ಅವರು ಪೌರತ್ವ ಕಾನೂನು ಹಿಂದೆ ಪಡೆಯಬೇಕು ಎಂಬ ಪ್ರಸ್ತಾವವನ್ನು ಮಂಡಿಸಿ ಮಾತಾಡುತ್ತಿದ್ದರು.