ಸನ್ಮಾರ್ಗ ವಾರ್ತೆ-
ಮಂಗಳೂರು ಜ. 3- ಸನ್ಮಾರ್ಗ ಸೀರತ್ ಕ್ವಿಝ್ ಸ್ಪರ್ಧೆ 2019 ರ ಬಹುಮಾನ ವಿತರಣಾ ಕಾರ್ಯಕ್ರಮವು ಸನ್ಮಾರ್ಗ ಕಚೇರಿ ಹಿದಾಯತ್ ಸೆಂಟರ್ ನಲ್ಲಿ ನಡೆಯಿತು. ಸ್ಪರ್ಧೆಯಲ್ಲಿ ದ . ಕ., ಉಡುಪಿ, ಮಂಡ್ಯ, ಶಿವಮೊಗ್ಗ, ರಾಯಚೂರು, ಕೇರಳದ ಓದುಗರು ಭಾಗವಹಿಸಿದ್ದು, ಒಟ್ಟು 70 ಅಂಕಗಳ ಪೈಕಿ ಪೂರ್ಣ 70 ಅಂಕವನ್ನು ಪಡೆಯುವ ಮೂಲಕ ಅಹ್ಲಮ್ ಕಲಾಯಿ ಯವರು ಪ್ರಥಮ ಬಹುಮಾನ 3000 ರೂಪಾಯಿ ನಗದು, ಪ್ರಮಾಣ ಪತ್ರ ಮತ್ತು ಸುಲ್ತಾನ್ ಡೈಮಂಡ್ ಮತ್ತು ಗೋಲ್ಡ್ ಜುವೆಲ್ಲರ್ಸ್ ನ ವಿಶೇಷ ಉಡುಗೊರೆಯನ್ನು ಪಡೆದುಕೊಂಡರು. ಹಲೀಮ ಕೌಸರ್ ದೇರಳಕಟ್ಟೆ ಇವರು ದ್ವಿತೀಯ ಬಹುಮಾನ 2000 ರೂಪಾಯಿ ನಗದು, ಪ್ರಮಾಣ ಪತ್ರ ಮತ್ತು ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್ ಜುವೆಲ್ಲರ್ಸ್ ನ ವಿಶೇಷ ಉಡುಗೊರೆಯನ್ನು ಪಡೆದುಕೊಂಡರು. ಲತೀಫ ತೊಕ್ಕೊಟ್ಟು ಇವರು ತೃತೀಯ ಬಹುಮಾನ 1000 ರೂಪಾಯಿ ನಗದು, ಪ್ರಮಾಣ ಪತ್ರ ಮತ್ತು ಸುಲ್ತಾನ್ ಡೈಮಂಡ್ ಮತ್ತು ಗೋಲ್ಡ್ ಜುವೆಲ್ಲರ್ಸ್ ನ ವಿಶೇಷ ಉಡುಗೊರೆಯನ್ನು ಪಡೆದುಕೊಂಡರು. ಹಾಗೆಯೇ,
ತಲಾ 500 ರೂಪಾಯಿ ನಗದು, ಪ್ರಮಾಣ ಪತ್ರ ಮತ್ತು ಸುಲ್ತಾನ್ ಡೈಮಂಡ್ ಮತ್ತು ಗೋಲ್ಡ್ ಜುವೆಲ್ಲರ್ಸ್ ನ ಉಡುಗೊರೆಯನ್ನು ಹನ್ನೊಂದು ಮಂದಿಗೆ ಸಮಾಧಾನಕರ ಬಹುಮಾನವಾಗಿ ನೀಡಲಾಯಿತು. ಅವರ ವಿವರ ಹೀಗಿದೆ:
ಸಫಿಯಾ ಮಂಗಳೂರು, ಜೈಬುನ್ನಿಸ, ಶಂಶಾದ್ ಅಬ್ದುಲ್ ಹಮೀದ್ ಪುತ್ತೂರು, ಜರೀನಾ ಬೇಗಮ್ ಉಳ್ಳಾಲ, ಆಯಿಷಾ ವಸ್ಮಿಯ ಕಲ್ಲಾಪು, ಶಫಾನ ಕಾರ್ಕಳ, ಮೊಹಮ್ಮದ್ ಸಫ್ವಾನ್ ಆಲಿಯಾ ಕೇರಳ, ನಾಫಿಯಾ ಉಪ್ಪಿನಂಗಡಿ, ಮುನೀರಾ ಬಿ ಸಿ ರೋಡ್,ರುಕ್ಸಾನಾ ಫಾತಿಮಾ ಉಪ್ಪಿನಂಗಡಿ, ಖತೀಜಾ ಬಂಟ್ವಾಳ.
ಬಹುಮಾನ ವಿಜೇತರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಮೌಲ್ಯ ಮಾಪಕರಾಗಿ ಮಿಸ್ಬಾ ತರೀಕೆರೆ ಅವರು ಸಹಕರಿಸಿದ್ದು, ಅವರಿಗೆ ರೂಪಾಯಿ 1000 ನಗದು ಮತ್ತು ಸುಲ್ತಾನ್ ಡೈಮಂಡ್ ಮತ್ತು ಗೋಲ್ಡ್ ಜುವೆಲ್ಲರ್ಸ್ ನ ಉಡುಗೊರೆಯನ್ನು ಕೊಟ್ಟು ಗೌರವಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತಾಡಿದ ಸನ್ಮಾರ್ಗ ಸಂಪಾದಕ ಏ ಕೆ ಕುಕ್ಕಿಲ ಅವರು, ಕ್ವಿಝ್ ಪ್ರಶ್ನಾವಳಿಯನ್ನು ತಯಾರಿಸಿದ ಖದೀಜಾ ನುಸ್ರತ್ ಅಬುಧಾಬಿ ಅವರಿಗೆ, ಪ್ರಾಯೋಜಕತ್ವವನ್ನು ನೀಡಿದ ಸುಲ್ತಾನ್ ಡೈಮಂಡ್ ಮತ್ತು ಗೋಲ್ಡ್ ಜುವೆಲ್ಲರ್ಸ್ ಸಂಸ್ಥೆಗೆ ಮತ್ತು ಧನ ಸಹಾಯ ನೀಡಿ ಸಹಕರಿಸಿದವರಿಗೆ ಕೃತಜ್ಞತೆಗಳನ್ನು ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಸ್ಥಾನೀಯ ಅಧ್ಯಕ್ಷ ಕೆ ಎಂ ಅಶ್ರಫ್ ಸಂದರ್ಭೋಚಿತವಾಗಿ ಮಾತನಾಡಿದರು. ಸನ್ಮಾರ್ಗ ಟ್ರಸ್ಟ್ ನ ಸದಸ್ಯರಾದ ಕೆ ಎಂ ಶರೀಫ್ ಅವರು ಸಮಾರೋಪ ನುಡಿಗಳನ್ನಾಡಿದರು.
ಸುಲೈಮಾನ್ ಪಕ್ಕಲಡ್ಕ ಕುರ್ ಆನ್ ಪಠಿಸಿದರು. ಸಲೀಮ್ ಬೋಳಂಗಡಿ ನಿರೂಪಿಸಿ, ಧನ್ಯವಾದವಿತ್ತರು.













