ಕೇರಳ ಮಾದರಿಯಲ್ಲಿ ತಮಿಳ್ನಾಡು ವಿಧಾನಸಭೆ ಕೂಡ ಪೌರತ್ವ ವಿರೋಧಿ ಪ್ರಸ್ತಾವ ಅಂಗೀಕರಿಸಬೇಕು- ಡಿಎಂಕೆ

0
1196

ಸನ್ಮಾರ್ಗ ವಾರ್ತೆ-

ಚೆನ್ನೈ, ಜ. 3: ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ತಮಿಳ್ನಾಡು ವಿಧಾನಸಭೆಯೂ ಪ್ರಸ್ತಾಪ ಪಾಸು ಮಾಡಬೇಕೆಂದು ಡಿಎಂಕೆ ಆಗ್ರಹಿಸಿದೆ. ಡಿಎಂಕೆಯ ಶಾಸಕರು ವಿಧಾನಸಭಾ ಕಾರ್ಯದರ್ಶಿ ಕೆ. ಶ್ರೀನಿವಾಸ್‍ಗೆ ಪತ್ರ ಬರೆದಿದ್ದಾರೆ. ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾವ ಪಾಸು ಮಾಡಬೇಕೆಂದು ಡಿಎಂಕೆ ಪತ್ರದಲ್ಲಿ ಆಗ್ರಹಿಸಿದೆ. ಸಂವಿಧಾನ ಕೊಡಮಾಡಿದ ಜಾತ್ಯತೀತತೆಯನ್ನು ನಾಶಪಡಿಸುವ ಪೌರತ್ವ ತಿದ್ದುಪಡಿ ಕಾನೂನು ರದ್ದುಪಡಿಸಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸುವ ಪ್ರಸ್ತಾಪವನ್ನು ಕೇರಳ ವಿಧಾನಸಭೆ ಕಳೆದವಾರ ಪಾಸು ಮಾಡಿತ್ತು.

ಕಳೆದ ಮಂಗಳವಾರ ಸೇರಿದ ವಿಶೇಷ ವಿಧಾನಸಭಾ ಅಧಿವೇಶನದಲ್ಲಿ ನಿಯಮ 118ರ ಪ್ರಕಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಡಿಸಿದ ಪ್ರಸ್ತಾವವನ್ನು ಬಿಜೆಪಿಯ ಒಬ್ಬ ಸದಸ್ಯ ಮಾತ್ರ ವಿರೋಧಿಸಿದ್ದರು. ಬಿಜೆಪಿ ಓ. ರಾಜಗೋಪಾಲ್ ತನ್ನ ಭಾಷಣದಲ್ಲಿ ಪ್ರಸ್ತಾವವನ್ನು ವಿರೋಧಿಸಿದ್ದರು. ಆದರೆ ವಿರೋಧಿಸುವವರು ಕೈ ಎತ್ತಿ ಎಂದು ಹೇಳಿದಾಗ ಅವರು ಕೈ ಎತ್ತಿರಲಿಲ್ಲ. ಭಾಷಣ ಮಾಡಿದ 19ರಲ್ಲಿ 18 ಮಂದಿ ಪೌರತ್ವ ಕಾನೂನನ್ನು ವಿರೋಧಿಸಿದ್ದರು.