ಪೌರತ್ವ ಕಾನೂನು: ಕೇರಳದ ರಾಜ್ಯಪಾಲರನ್ನು ವಿರೋಧಿಸಿದ ಸಹೋದರ ಆಸಿಫ್ ಮುಹಮ್ಮದ್ ಖಾನ್

0
1268

ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಜ. 4: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧದ ಹೋರಾಟವನ್ನು ಆಕ್ಷೇಪಿಸಿರುವ ಕೇರಳದ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್‍ರ ನಿಲುವನ್ನು ಅವರ ಸಹೋದರ, ಮಾಜಿ ದಿಲ್ಲಿ ಶಾಸಕ ಆಸಿಫ್ ಮುಹಮ್ಮದ್ ಖಾನ್ ತಿರಸ್ಕರಿಸಿದ್ದಾರೆ. ಕಾನೂನು ಹಿಂಪಡೆಯುವವರೆಗೆ ಹೋರಾಡುವೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮುಸ್ಲಿಮರ ವಿರುದ್ಧ ತಂದ ಕಾನೂನನ್ನು ಅರಿತೇ ತಾನು ಪ್ರತಿಭಟನೆಗೆ ಇಳಿದಿದ್ದೇನೆ. ಜನಪರ ಪ್ರತಿಭಟನೆಯಿಂದ ಮಾತ್ರ ಇದನ್ನು ವಿಫಲಗೊಳಿಸಲು ಸಾಧ್ಯವಿದೆ. ಕೇಂದ್ರದ ವಿರುದ್ಧ ಮಾತಾಡಲು ಆರಿಫ್‍ಗೆ ಆಗುವುದಿಲ್ಲ. ಬಿಜೆಪಿಗಾಗಿ ಕೆಲಸ ಮಾಡದೆಯೇ ಸಹೋದರ ರಾಜ್ಯಪಾಲ ಆಗಿದ್ದಾರೆ. ತನ್ನ ವಿರುದ್ಧ ಕೇಸುಗಳನ್ನು ಎದುರಿಸುವೆನು. ಆದರೆ, ಪ್ರತಿಭಟಯಿಂದ ಹಿಂದೆ ಸರಿಯುವುದಿಲ್ಲ ಎಂದು ಆಸಿಫ್ ಹೇಳಿದರು.

ಆರಿಫ್ ಕೇರಳ ರಾಜ್ಯಪಾಲರಾದಾಗ ಶಾಹೀನ್ ಬಾಗ್ ಸಮೀಪದ ಮನೆಯಲ್ಲಿ ಆಸಿಫ್ ಔತಣ ಕೂಟ ಏರ್ಪಡಿಸಿದ್ದರು. ಹಳೆಯ ಕಾಂಗ್ರೆಸಿಗನಾದ ಸೋದರನಂತೆ ಕಾಂಗ್ರೆಸ್ ಸೇರಿ ಅವರು ಓಖ್ಲ ಕ್ಷೇತ್ರದಿಂದ ಶಾಸಕರಾಗಿದ್ದರು.