ಸನ್ಮಾರ್ಗ ವಾರ್ತೆ-
ಮಿಯಾಮಿ, ಜ. 4: ಭಾರತದ ಪೌರತ್ವ ತಿದ್ದುಪಡಿ ಕಾನೂನು, ಪೌರತ್ವ ನೋಂದಣಿ ವಿರುದ್ಧ ಮಿಯಾಮಿಯ ಟೋರ್ಪ್ ಆಫ್ ಫ್ರೆಂಡ್‍ಶಿಪ್‍ನಲ್ಲಿ ಭಾರತೀಯರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಭಾರತದ ಪ್ರತಿಭಟನಾಕಾರರಿಗೆ ಬೆಂಬಲ ಘೋಷಿಸಲಾಯಿತು. ತೆಲಂಗಾಣ, ಕೇರಳ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ಪಂಜಾಬ್, ಬಿಹಾರ್, ಉತ್ತರಪ್ರದೇಶರಾಜ್ಯಗಳ ಹಲವಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಅಮೆರಿಕನ್ನರು, ಕ್ಯೂಬನ್ ಪ್ರಜೆಗಳು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾದರು. ಅಮೆರಿಕ ಮತ್ತು ಭಾರತದ ರಾಷ್ಟ್ರ ಗೀತೆಯ ನಂತರ ಭಾರತದ ಸಂವಿಧಾನದ ಪೀಠಿಕೆಯನ್ನು ವಾಚಿಸಲಾಯಿತು. ಪ್ಲೋರಿಡ ಹೌಸ್ ಆಫ್ ರೆಪ್ರೆಸಂಟೇಟಿವ್‍ಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಸಾಜನ್ ಕುರಿಯನ್, ದಕ್ಷಿಣ ಫ್ಲೋರಿಡದ ಸಾಮಾಜಿಕ ಪ್ರತಿನಿಧಿಗಳು ಮಾತಾಡಿದರು.
ಮಕ್ಕಳು, ಮಹಿಳೆಯರು, ಪುರುಷರು, ಹಿರಿಯವರು, ವಿದ್ಯಾರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯ ಕೊನೆಗೊಳಿಸಬೇಕು. ತಾರತಮ್ಯ ಮತ್ತು ಸಂವಿಧಾನ ವಿರೋಧಿ ಕಾನೂನನ್ನು ಭಾರತ ಸರಕಾರ ರದ್ದುಪಡಿಸಬೇಕು. ಭಾರತದ ಸಂವಿಧಾನ ನೀಡಿದ ಧರ್ಮನಿರಪೇಕ್ಷತೆಯ ಬಹುತ್ವದ ಆದರ್ಶಗಳನ್ನು ಎತ್ತಿಹಿಡಿಯಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪೊಲೀಸ್ ದೌರ್ಜನ್ಯದ ಬಗ್ಗೆ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಯಬೇಕು. ಜಾಮಿಯ ಮಿಲ್ಲಿಯ ವಿಶ್ವವಿದ್ಯಾನಿಲಯದ ಕ್ಯಾಂಪಸ್‍ಗೆ ನುಗ್ಗಲು ಆದೇಶ ನೀಡಿದ ಪೊಲೀಸಧಿಕಾರಿಯನ್ನು ಅಮಾನತುಗೊಳಿಸಬೇಕು. ಪೊಲೀಸ್ ದಾಳಿಯಲ್ಲಿ ಬಲಿಯಾದವರಿಗೆ ಚಿಕಿತ್ಸೆ ದೃಢಪಡಿಸಬೇಕೆಂದು ಪ್ರತಿಭಟನಾಕಾರರು ಹೇಳಿದರು.












