ಅಂಜು ಮತ್ತು ಶರತ್ ರ ಮದುವೆ ಜವಾಬ್ದಾರಿಯನ್ನು ವಹಿಸಿಕೊಂಡ ಮಸೀದಿ ಕಮಿಟಿ; ಮಸೀದಿ ಲೆಟರ್ ಹೆಡ್ ನಲ್ಲಿ ಮುದ್ರಿಸಲಾದ ಆಮಂತ್ರಣ ಪತ್ರಿಕೆ ವೈರಲ್

0
1369

ಸನ್ಮಾರ್ಗ ವಾರ್ತೆ-
ಕೇರಳ, ಜ. 5: ಕಾಯಂಕುಳ ಸಮೀಪದ ಮಸೀಯ ಬಳಿ ಚಪ್ಪರ ಹಾಕಲಾಗಿದೆ. ಇಡೀ ಊರಿನ ಆಶೀರ್ವಾದದೊಂದಿಗೆ ಅಂಜು ಮತ್ತು ಶರತ್‍ರ ಮದುವೆ ನಡೆಯಲಿದೆ. ಮೊಹಲ್ಲಾ ಜಮಾಅತ್ ಕಮಿಟಿ ಮತ್ತು ಚೋರವಳ್ಳಿ ಮುಸ್ಲಿಂ ಜಮಾಅತ್ ಗಳು ಜಂಟಿಯಾಗಿ ಅಂಜುರ ಮದುವೆಯನ್ನು ನೆರವೇರಿಸಿ ಕೊಡುತ್ತಿದೆ. ಮಸೀದಿಯ ಅಂಗಳದಲ್ಲಿ ಚಪ್ಪರ ಹಾಕಿ ಮದುವೆ ಕಾರ್ಯ ನಡೆಯಲಿದೆ. ಚೋರವಳ್ಳಿ ಜಮಾಅತ್ ವ್ಯಾಪ್ತಿಯ ಚೋರವಳ್ಳಿ ದೇವಸ್ಥಾನದ ಸಮೀಪ ಅಮೃತಾಂಜಲಿಯ ದಿವಂಗತ ಅಶೋಕನ್ ಮತ್ತು ಬಿಂದು ದಂಪತಿಯ ಪುತ್ರಿ ಅಂಜು ಆಗಿದ್ದು ಅವರ ಮದುವೆಯನ್ನು ಮೊಹಲ್ಲ ಕಮಿಟಿ ವಹಿಸಿಕೊಂಡಿದೆ. ಬಾಡಿಗೆ ಮನೆಯಲ್ಲಿರುವ ಬಡ ಕುಟುಂಬ ಬಿಂದುವುರದ್ದು. ಅವರು ಸಹಾಯ ಯಾಚಿಸಿದ್ದರಿಂದ ಮದುವೆಯ ಜವಾಬ್ದಾರಿ ವಹಿಸಿಕೊಂಡೆವು ಎಂದು ಮಸೀದಿ ಕಾರ್ಯದರ್ಶಿ ನುಜುಮುದ್ದೀನ್ ಹೇಳಿದರು.

ಶರತ್ ಎಂಬವರು ಜನವರಿ ಹತ್ತೊಂಬರಂದು ಮಸೀದಿಯ ಮುಂಭಾಗದಲ್ಲಿ ನಡೆಯುವ ಮದುವೆಯಲ್ಲಿ ಅಂಜುರನ್ನು ಮದುವೆಯಾಗುತ್ತಿದ್ದಾರೆ. ಜಮಾಅತ್ ಲೆಟರ್ ಹೆಡ್ ನಲ್ಲಿ ಮದುವೆ ಆಮಂತ್ರಣ ಮುದ್ರಿಸಲಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಇದು ವೈರಲ್ ಆಗುತ್ತಿದೆ. ಸಾಮಾಜಿಕ ವಾತಾವರಣ ಕಲುಷಿತಗೊಂಡ ವೇಳೆ ಇಂತಹ ಒಂದು ಮದುವೆ ಕಾರ್ಯಕ್ರಮ ಸೌಹಾರ್ದದ ಉದಾತ್ತ ಮಾದರಿಯಾಗಿದೆ ಎಂದು ಸಾಮಾಜಿಕ ಮಾಧ್ಯಮಗಳು ಚಿತ್ರಿಸುತ್ತಿವೆ. ಪೌರತ್ವ ತಿದ್ದುಪಡಿ ಕಾನೂನು ಜನರನ್ನು ವಿಭಿಸುವ ಫ್ಯಾಶಿಸ್ಟ್ ನೀತಿಯ ವಿರುದ್ಧ ಕೂಡ ಈ ಮದುವೆಯನ್ನು ಎತ್ತಿ ತೋರಿಸಲಾಗುತ್ತಿದೆ.