ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಜ. 4: ಪೊಲೀಸ್ ಕಸ್ಟಡಿಯಲ್ಲಿರುವ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರ ಶೇಖರ್ ಆಝಾದ್‍ರಿಗೆ ಗಂಭೀರ ಆರೋಗ್ಯ ಸಮಸ್ಯೆಯಿದ್ದು ಕೂಡಲೇ ಅವರಿಗೆ ಚಿಕಿತ್ಸೆ ನೀಡಬೇಕೆಂದು ಡಾ.ಹರ್ಜಿತ್ ಸಿಂಗ್ ಭಟ್ಟಿ ಟ್ವೀಟ್ ಮಾಡಿ ತಿಳಿಸಿದ್ದಾರೆ. ಆಝಾದ್‍ಗೆ ಯಾವ ಕ್ಷಣದಲ್ಲಿಯೂ ಹೃದಯಾಘಾತ ಆಗಬಹುದು. ಚಿಕಿತ್ಸೆಗಾಗಿ ಕೂಡಲೆ ಏಮ್ಸ್ ಗೆ ದಾಖಲಿಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾರಿಗೂ ಪೊಲೀಸರಿಗೂ ವೈದ್ಯರು ಮನವಿ ಮಾಡಿದ್ದಾರೆ. ವಾರವಿಡೀ ಪ್ಲೊಬೊಟೊಮಿ ಅಗತ್ಯವಿರುವ ರೋಗ ಆಝಾದ್‍ರಿಗೆ ಇದೆ. ಒಂದು ವರ್ಷದಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರು ಹೇಳಿದರು. ದಿಲ್ಲಿ ಏಮ್ಸ್ ನಲ್ಲಿ ಹೆಮಟೋಲಜಿ ವಿಭಾಗದ ಪ್ಲೊಬೊಟೊಮಿ ಅಗತ್ಯವಿರುವ ಓರ್ವ ರೋಗಿ ಆಝಾದ್ ಆಗಿದ್ದಾರೆ. ಕಳೆದ ಒಂದು ವರ್ಷದಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನು ಸರಿಯಾಗಿ ಮಾಡದಿದ್ದರೆ ರಕ್ತ ಹೆಪ್ಪು ಗಟ್ಟುತ್ತದೆ. ಹೃದಯಸ್ತಂಭನ ಆಗಬಹುದು.
ತನ್ನ ಆರೊಗ್ಯ ಸ್ಥಿತಿಯ ಕುರಿತು ಚಂದ್ರಶೇಖರ್ ಜೈಲಿನ ಪೊಲೀಸ್ ಮುಖ್ಯಸ್ಥರಿಗೆ ತಿಳಿಸಿದ್ದಾರೆ ಎಂದು ಏಮ್ಸ್ ಗೆ ಹೋಗಲು ಪೊಲೀಸರು ಬಿಡುವುದಿಲ್ಲ ಎಂದು ವೈದ್ಯರು ಟ್ವೀಟ್ ಮಾಡಿ ತಿಳಿಸಿದ್ದಾರೆ.












