ಸನ್ಮಾರ್ಗ ವಾರ್ತೆ-
ಗುವಾಹಟಿ, ಜ.4: ಅಸ್ಸಾಮಿನಲ್ಲಿ ಅನಧಿಕೃತ ವಲಸೆಗಾರರೆಂದು ಹೇಳಿ ಬಯಲು ಬಂಧಿಖಾನೆಯಲ್ಲಿ ಇರಿಸಲಾದವರಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಇದರೊಂದಿಗೆ ಮೂರು ವರ್ಷದಲ್ಲಿ ಅಸ್ಸಾಮಿನ ಡಿಟೆನ್ಶನ್ ಸೆಂಟರ್ ನಲ್ಲಿ ಮೃತಪಟ್ಟಿರುವವರ ಸಂಖ್ಯೆ 29 ಆಯಿತು. ಅನಾರೋಗ್ಯಗೊಂಡಿದ್ದ ಅವರನ್ನು ಹತ್ತು ದಿವಸದ ಹಿಂದೆ ಗುವಾಹಟಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ನಿಧನರಾದರು. ಅಸ್ಸಾಮಿನಲ್ಲಿ ಪೌರತ್ವ ದಾಖಲೆ ಇಲ್ಲದವರನ್ನು ಇರಿಸಿರುವ ಆರು ಡಿಟೆನ್ಶನ್ ಸೆಂಟರ್ ನಲ್ಲಿ ಸಾವಿರ ಮಂದಿ ಇದ್ದಾರೆ. ಗೋಲ್ಪಾರ ಜಿಲ್ಲೆಯಲ್ಲಿ ಏಳನೆ ಬಯಲು ಬಂಧಿಖಾನೆ ನಿರ್ಮಾಣ ಪ್ರಗತಿಯಲ್ಲಿದೆ.
ಅಸ್ಸಾಂ ವಿಧಾನಸಭೆಯಲ್ಲಿ ಸಲ್ಲಿಸಲಾದ ದಾಖಲೆಗಳ ಪ್ರಕಾರ ಈವರೆಗೆ ಮೃತಪಟ್ಟಿರುವವರಲ್ಲಿ ಇಬ್ಬರು ಮಾತ್ರ ಬಾಂಗ್ಲದೇಶದ ದಾಖಲೆ ಇರುವವರು. ಇತರರೆಲ್ಲ ಅಸ್ಸಾಂನ ವಿಳಾಸ ಹೊಂದಿರುವವರು ಆಗಿದ್ದಾರೆ.












