ರೋಹಿಂಗ್ಯನ್ನರನ್ನು ದೇಶದಿಂದ ಹೊರಹಾಕುವುದು ಸರಕಾರದ ಮುಂದಿನ ಗುರಿ- ಕೇಂದ್ರ ಸಚಿವ ಜಿತೇಂದ್ರ ಪ್ರಸಾದ್

0
812

ಸನ್ಮಾರ್ಗ ವಾರ್ತೆ-
ಶ್ರೀನಗರ, ಜ. 4: ರೋಹಿಂಗ್ಯನ್ನರನ್ನು ದೇಶದಿಂದ ಹೊರದಬ್ಬುವುದು ಸರಕಾರದ ಮುಂದಿನ ಗುರಿಯೆಂದು ಕೇಂದ್ರ ಸಹ ಸಚಿವ ಜಿತೇಂದ್ರ ಸಿಂಗ್ ಹೇಳಿದರು. ಪೌರತ್ವ ತಿದ್ದುಪಡಿ ಕಾನೂನಿಗೆ ಸಂಬಂಧಿಸಿದ ಪ್ರತಿಭಟನೆಗಳ ನಡುವೆ ಸಚಿವರು ಹೇಳಿಕೆ ನೀಡಿದ್ದಾರೆ. ಜಮ್ಮುಕಾಶ್ಮೀರ ಸಹಿತ ದೇಶದ ಎಲ್ಲ ಕಡೆಗಳಲ್ಲಿ ಪೌರತ್ವ ತಿದ್ದುಪಡಿ ಕಾನೂನು ಅನ್ವಯವಾಗಲಿದೆ. ಮುಂದಿನ ಗುರಿ ರೋಹಿಂಗ್ಯನ್ನರನ್ನು ದೇಶದಿಂದ ಹೊರಗೆ ದೂಡುವುದು ಆಗಿದೆ.

ಜಮ್ಮುಕಾಶ್ಮೀರದಲ್ಲಿ ಹಲವಾರು ರೋಹಿಂಗ್ಯನ್ನರಿದ್ದಾರೆ. ಅವರನ್ನು ದೇಶದಿಂದ ಹೊರಗೆ ಹಾಕಲಾಗುವುದು. ಸಿಐಎ ಅವರಿಗೆ ಸಂರಕ್ಷಣೆ ನೀಡುವುದಿಲ್ಲ ಎಂದು ಜಿತೇಂದ್ರ ಸಿಂಗ್ ಹೇಳಿದರು.

ರೋಹಿಂಗ್ಯನ್ನರು ಭಾರತದ ಮೂರು ನೆರೆ ದೇಶಗಳ ಅಲ್ಪಸಂಖ್ಯಾತರಲ್ಲ. ಅವರು ಮ್ಯಾನ್ಮಾರಿನವರು. ರೋಹಿಂಗ್ಯನ್‍ಗಳು ಮರಳಿ ಹೋಗಬೇಕು. ನೆರೆಯ ರಾಜ್ಯಗಳಿಂದ ಬರುವ ಅಲ್ಪಸಂಖ್ಯಾತರನ್ನು ಮಾತ್ರ ಸಿಐಎಯ ಮೂಲಕ ಅನುಕೂಲ ಮಾಡಿಕೊಡಲಾಗುವುದು . ರೋಹಿಂಗ್ಯನ್ನರು ಇದಕ್ಕೆ ಸೇರಿಲ್ಲ ಎಂದು ಸಚಿವರು ಹೇಳಿದರು.