
ಸನ್ಮಾರ್ಗ ವಾರ್ತೆ-
ಕೊಚ್ಚಿ, ಜ. 7: ರಾಷ್ಟ್ರದ ಗಮನ ಬೇರೆ ಬೇರೆ ವಿಷಯಗಳಲ್ಲಿ ತಿರುಗಿದ್ದು ಈ ನೆಪದಲ್ಲಿ ಅತಿವೇಗದಿಂದ ದೇಶದಾದ್ಯಂತ ಇಂಧನ ಬೆಲೆಯೇರಿಕೆ ಆಗಿದೆ. ಕಳೆದ ಒಂದು ವರ್ಷದಲ್ಲಿ ಪೆಟ್ರೋಲ್ಗೆ 7.27ರೂ. ಹೆಚ್ಚಳವೂ ಕಳೆದ ಆರು ತಿಂಗಳಿಂದ 5.42ರೂ. ಹೆಚ್ಚಳವೂ ಆಗಿದೆ. ಡೀಸೆಲ್ಗೆ ಇದು ಯಥಾ ರೀತಿ 6.39 ಮತ್ತು 4.68ರೂ. ಹೆಚ್ಚಳವಾಗಿದೆ.
ಸೋಮವಾರ ಪೆಟ್ರೊಲ್ಗೆ ಹದಿನೈದು ಪೈಸೆ ಹೆಚ್ಚಿತು. ಡೀಸೆಲ್ಗೆ 17 ಪೈಸೆ ಹೆಚ್ಚಿತು. ಇಂಧನಬೆಲೆ ಹೆಚ್ಚಳದ ಪರಿಣಾಮ ಬಸ್, ಸರಕುಸಾಗಾಟ ಕ್ಷೇತ್ರದಲ್ಲಿ ಸಂದಿಗ್ಧ ಪರಿಸ್ಥಿತಿಯಿದೆ ಎಂದು ವಾಹನ ಮಾಲಕರು ಹೇಳುತ್ತಿದ್ದಾರೆ. ಜನಸಾಮಾನ್ಯರ ದೈನಂದಿನ ಬದುಕು ಹೆಚ್ಚು ಕಷ್ಟಕರವಾಗಿದ್ದು. ಇಂಧನ ಬೆಲೆಯೇರಿಕೆಯು ಸರಕು ಸಾಗಾಟವನ್ನು ಬಾಧಿಸಿದ್ದು ದಿನಬಳಕೆಯ ವಸ್ತುಗಳ ಬೆಲೆ ಹೆಚ್ಚಳಕ್ಕೆ ಇದು ಕಾರಣವಾಗುತ್ತಿದೆ. ತೈಲ ಕಂಪೆನಿಗಳು ತೋಚಿದಂತೆ ಬೆಲೆ ಹೆಚ್ಚಿಸುತ್ತಿದ್ದರೂ ಕೇಂದ್ರಸರಕಾರ ಮೌನವಾಗಿದೆ. ಇಂಧನ ತೆರಿಗೆಯಲ್ಲಿ ಐದು ವರ್ಷದಲ್ಲಿ 14,71,899 ಕೋಟಿ ಕೇಂದ್ರ ಖಜಾನೆಗೆ ಹೋಗಿದೆ. ಚಾಲ್ತಿ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕೇಂದ್ರಕ್ಕೆ 57,873 ಕೋಟಿ ರೂಪಾಯಿ ಮತ್ತು ರಾಜ್ಯಗಳಿಗೆ 51.700 ಕೋಟಿ ರೂಪಾಯಿ ಇಂಧನ ತೆರಿಗೆ ಪಾವತಿಸಲ್ಪಟ್ಟಿದೆ.











