ಜೆಎನ್‍ಯು: ಐಷಿ ಘೋಷ್ ಸಹಿತ 19 ಮಂದಿ ವಿರುದ್ಧ ಕೇಸು: ಮುಸುಕುಧಾರಿ ಯುವತಿ ಎ ಬಿ ವಿ ಪಿಯ ಕೋಮಲ್ ಸಿಂಗ್ ಎಂದ ವಿದ್ಯಾರ್ಥಿಗಳು

0
849

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಜ. 7: ಜೆಎನ್‍ಯು ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷೆ ಐಷಿ ಘೋಷ್ ವಿರುದ್ಧ ದಿಲ್ಲಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಜನುವರಿ ನಾಲ್ಕರಂದು ಸರ್ವರ್ ಕೋಣೆಗೆ ಬಲವಂತದಿಂದ ನುಗ್ಗಿದ್ದಾರೆ ಎಂಬ ವಿಶ್ವವಿದ್ಯಾನಿಲಯದ ಅಧಿಕಾರಿಗಳ ದೂರಿನಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು ಐಷಿ ಅಲ್ಲದೆ ಇತರ ಹತ್ತೊಂಬಂತ್ತು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ವಿಶ್ವವಿದ್ಯಾನಿಲಯದ ಆನ್‍ಲೈನ್ ರಿಜಿಸ್ಟ್ರೇಶನ್ ವ್ಯವಸ್ಥೆಗೆ ಹಾನಿ ಮಾಡಿದ್ದಾರೆ ಮತ್ತು ಭದ್ರತಾ ಸಿಬ್ಬಂದಿಗೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪ ಹೊರಿಸಲಾಗಿದೆ. ಸಾರ್ವಜನಿಕ ಆಸ್ತಿ ನಾಶ, ಭದ್ರತಾ ಸಿಬ್ಬಂದಿಗಳಿಗೆ ಹಲ್ಲೆ ಸಹಿತ ಆರೋಪಗಳನ್ನು ಐಷಿ ಮತ್ತು ಸಂಗಡಿಗರ ವಿರುದ್ಧ ಹೊರಿಸಲಾಗಿದೆ.

ಇದೇವೇಳೆ, ಜೆಎನ್‍ಯು ಹಾಸ್ಟೆಲ್‍ನಲ್ಲಿ ದಾ೦ಧಲೆ ಮಾಡಿದ ಎಬಿವಿಪಿ ತಂಡದ ಯುವತಿ ಕೋಮಲ್ ಸಿಂಗ್ ಎಂದು ಇಂದು ಕೂಡ ವಿದ್ಯಾರ್ಥಿಗಳು ಹೇಳಿದ್ದಾರೆ. ದಿಲ್ಲಿ ವಿಶ್ವವಿದ್ಯಾನಿಲಯದ ಅಕ್ರಮ ಘಟನೆಗಳಲ್ಲಿ ಕೋಮಲ್ ಸಿಂಗ್ ಶಾಮೀಲಾಗಿದ್ದಳು ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ದಾಳಿ ಯೋಜನೆ ರೂಪಿಸಿದ ಎಬಿವಿಪಿ ಕಾರ್ಯಕರ್ತನೊಡನೆ ಕೋಮಲ್ ಸಿಂಗ್ ಮಾತಾಡುವ ವೀಡಿಯೊ ಸಂಭಾಷಣೆ ಬಹಿರಂಗವಾಗಿದೆ. ತಾನು ಕ್ಯಾಂಪಸ್‍ನಲ್ಲಿ ಇರುವ ವಿಷಯ ಯಾರಿಗೂ ಹೇಳಬೇಡ ಎಂದಿರುವ ಕೋಮಲ್ ಸಿಂಗ್ ವಾಟ್ಸಪ್ ಚಾಟ್, ಸ್ಕ್ರೀನ್ ಶಾಟ್‍ಗಳೂ ಬಹಿರಂಗವಾಗಿದೆ.