ಜೆಎನ್‍ಯುನಲ್ಲಿ ಟುಕ್ಡೆ, ಟುಕ್ಡೆ ಗ್ಯಾಂಗ್ ನೋಡಿಲ್ಲ -ಜೈಶಂಕರ್: ಬಿಜೆಪಿಗೆ ಮುಜುಗರ

0
1051

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಜ. 7: ಜವಾಹರಲಾಲ್ ನೆಹರೂ ಯುನಿವರ್ಸಿಟಿಯಲ್ಲಿ ತಾನು ಕಲಿಯುತ್ತಿದ್ದ ಸಮಯದಲ್ಲಿ ಯಾವುದೇ ಟುಕ್ಡೆ, ಟುಕ್ಡೆ ಗ್ಯಾಂಗ್ ಇರಲಿಲ್ಲ ಎಂದು ಕೇಂದ್ರ ವಿದೇಶ ಸಚಿವ ಎಸ್. ಜೈಶಂಕರ್ ಹೇಳಿದರು. ಜೆಎನ್‍ಯುನಲ್ಲಿ ಅಂತಹ ತಂಡಗಳಿರಲಿಲ್ಲ ಎಂದು ತನಗೆ ದೃಢವಾಗಿ ಹೇಳಲು ಸಾಧ್ಯವಿದೆ ಎಂದು ಜೈಶಂಕರ್ ಹೇಳಿದರು. ಸೋಮವಾರ ದಿಲ್ಲಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತಾಡುತ್ತಿದ್ದರು.

ಪ್ರತಿಪಕ್ಷ ಮತ್ತು ಎಡಪಕ್ಷಗಳನ್ನು ಆಕ್ಷೇಪಿಸಲು ಬಿಜೆಪಿ ನಿರಂತರ ಟುಕ್ಡೆ, ಟುಕ್ಡೆ ಗ್ಯಾಂಗ್ ಎಂದು ಹೇಳುತ್ತಿದೆ. ರವಿವಾರ ಜೆಎನ್‍ಯುನ ವಿದ್ಯಾರ್ಥಿಗಳು, ಅಧ್ಯಾಪಕರ ವಿರುದ್ಧ ನಡೆದ ದಾಳಿಯನ್ನು ಜೈಶಂಕರ ಖಂಡಿಸಿದ್ದರು. ಜೆಎನ್‍ಯುನ ಪರಂಪರೆಗೆ ಈ ದಾಂಧಲೆ ಒಪ್ಪುವುದಿಲ್ಲ ಎಂದು ಅವರು ಈ ಹಿಂದೆ ಪ್ರತಿಕ್ರಿಯಿಸಿದ್ದರು.