ಸನ್ಮಾರ್ಗ ವಾರ್ತೆ-
ಬಗ್ದಾದ್, ಜ. 8: ಸೇನಾ ಜನರಲ್ ಖಾಸಿಂ ಸುಲೈಮಾನಿಯ ಹತ್ಯೆಗೆ ಪ್ರತೀಕಾರವಾಗಿ ಅಮೆರಿಕದ ಇರಾಕಿನ ಸೇನಾ ನೆಲೆಗೆ ಇರಾನ್ ಮಿಸೈಲ್ ದಾಳಿ ನಡೆಸಿದಿದೆ ಮತ್ತು ೮೦ ಮಂದಿ ಅಮೇರಿಕನ್ ಭಯೋತ್ಪಾದಕರು ಸತ್ತಿದ್ದಾರೆ ಎಂದು ಇರಾನಿನ ಸರಕಾರೀ ಟೆಲಿವಿಷನ್ ಘೋಷಿಸಿದೆ. ಸ್ಥಳೀಯ ಸಮಯ ಬೆಳಗ್ಗೆ ಐದೂವರೆ -ಆರು ಗಂಟೆಯೊಳಗೆ ಅಂಬರ್ ಪ್ರಾಂತ್ಯದ ಐನ್ ಅಲ್ ಅಸದ್ ವಾಯು ನೆಲೆಗೆ ಇರ್ಬಿಲ್ ಸೈನಿಕ ಕೇಂದ್ರಕ್ಕೆ ಇರಾನ್ ನ ಬ್ಯಾಲೆಸ್ಟಿಕ್ ಮಿಸೈಲ್ ಬಡಿದಪ್ಪಳಿಸಿತು. ಇವೆರಡೂ ದಾಳಿ ಏಕಸಮಯದಲ್ಲಿ ನಡೆದಿದೆ. ಅಲ್ ಅಸದ್‍ನಲ್ಲಿ 13 ಮಿಸೈಗಳು ಬಿದ್ದಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ. ಭೂಮಿಯಿಂದ ಭೂಮಿಗೆ ಹಾರುವ ಬ್ಯಾಲೆಟಿಕ್ ಮಿಸೈಲ್ ಫತ್ಹ್ 313 ಅನ್ನು ಇರಾನ್ ದಾಳಿಗೆ ಬಳಸಿದೆ.
ಅಮೆರಿಕದ ಇರಾಕಿನ ಅತ್ಯಂತ ದೊಡ್ಡ ಸೇನಾನೆಲೆ ಅಲ್ ಅಸದ್ ವಾಯು ಕೇಂದ್ರವಾಗಿದೆ. ಐಸಿಸ್ ವಿರೋಧಿ ಹೋರಾಟಕ್ಕೆ ಅಮೆರಿಕ ಮತ್ತು ಮಿತ್ರ ದೇಶಗಳು ಇರಾಕಿನಲ್ಲಿ ಶಿಬಿರ ಹೂಡುವ ಸೇನಾ ಕೇಂದ್ರವಿದು. ಅಮೆರಿಕದ ಸೇನಾ ಕೇಂದ್ರಗಳ ಮೇಲೀನಾ ದಾಳಿಯನ್ನು ಇರಾನ್ ದೃಢೀಕರಿಸಿದೆ. ಸುಲೈಮಾನಿಯ ಕೊಲೆಪಾತಕಕ್ಕೆ ಪತ್ಯಾಘಾತ ಇದು ಎಂದು ಇರಾನ್ ನಾಯಕರು ಹೇಳಿದರು ಮತ್ತು ತನ್ನ ದೇಶದ ಸೈನಿಕರನ್ನು ಅಭಿನಂದಿಸಿದರು. ಇರಾಕ್‍ನ ಪರಿಸ್ಥಿತಿಯನ್ನು ಅವಲೋಕನ ನಡೆಸಲಾಗುತ್ತಿದೆ ಎಂದು ಪೆಂಟಗಾನ್ ತಿಳಿಸಿತು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಳವಣಿಗೆ ಮೇಲೆ ನಿಗಾವಿರಿಸಿದ್ದಾರೆ ಎಂದು ಅಮೆರಿಕ ರಕ್ಷಣಾ-ವಿದೇಶ ಸಚಿವಾಲಯಗಳು ತಿಳಿಸಿವೆ. ಇರಾಕಿನ ಸೇನಾ ನೆಲೆಯ ಮೇಲಿನ ದಾಳಿಯನ್ನು ಡೆಮಕ್ರಾಟಿಕ್ ನಾಯಕ ಅಮೆರಿಕ ಕಾಂಗ್ರೆಸ್ ಸ್ಪೀಕರ್ ನಾನ್ಸಿ ಪೆಲೋಸಿ ಖಂಡಿಸಿದರು. ಅಮೆರಿಕ ಸೈನಿಕರ ಸುರಕ್ಷೆಯನ್ನು ದೃಢಪಡಿಸಲು ಯಾವ ಕ್ರಮವನ್ನು ಟ್ರಂಪ್ ಸ್ವೀಕರಿಸಿದ್ದಾರೆ ಎಂದು ನ್ಯಾನ್ಸಿ ಪೆಲೋಸಿ ಪ್ರಶ್ನಿಸಿದ್ದಾರೆ. .
ಜನರಲ್ ಖಾಸಿಂ ಸುಲೈಮಾನಿಯ ಮೃತದೇಹ ದಫನ ಕಾರ್ಯ ಮುಗಿದು 2 ಗಂಟೆಗಳಲ್ಲಿ ಅಮೆರಿಕದ ವಿರುದ್ಧ ಇರಾನ್ ಬಲವಾದ ಪ್ರತಿದಾಳಿ ನಡೆಸಿದೆ. ಬಗ್ದಾದ್‍ನ ಅಮೆರಿಕ ಧೂತವಾಸದ ಮೇಲೆಯೂ ಸಲಾಹುದೀನ್ ಪ್ರಾಂತ್ಯದ ಅಮೆರಿಕದ ಸೇನಾ ನೆಲೆಯ ಮೇಲೆಯೂ ಶನಿವಾರ ರಾತ್ರೆ ರಾಕೆಟ್ ದಾಳಿ ನಡೆದಿತ್ತು. ಅಮೆರಿಕ ಧೂತವಾಸ ಸಹಿತ ಇರುವ ಗ್ರೀನ್ ಝೋನ್‍ನಲ್ಲಿ ಎರಡು ಮಾರ್ಟರ್ ಗಳು ಮತ್ತು ಸಲಾಹುದ್ದೀನ್ ಪ್ರಾಂತ್ಯದ ಅಲ್‍ಬಲದ್ ನೆಲೆಗೆ ಎರಡು ರಾಕೆಟ್‍ಗಳು ಬಡಿದಿದ್ದವು.
ಸುಲೈಮಾನ್ ಕೊಲೆಯ ಪ್ರತೀಕಾರ ತೀರಿಸಲಾಗುವುದು ಎಂದು ಕಳೆದ ದಿವಸ ಇರಾನ್ ಘೋಷಿಸಿತ್ತು. ಸುಲೇಮಾನಿಯವರ ಮೃತದೇಹವವನ್ನು ಹುಟ್ಟೂರು ಕೊರ್ಮಾನಿಯಲ್ಲಿ ಬೃಹತ್ ಜನಸಾಗರದ ಉಪಸ್ಥಿತಿಯಲ್ಲಿ ದಫನ ಮಾಡಲಾಗಿದೆ.
യു.എസ് സൈനിക താവളങ്ങളിൽ ഇറാന്റെ ആക്രമണം
യു.എസ് സൈനിക താവളങ്ങൾക്ക് നേരെ ഇറാന്റെ ആക്രമണ ദൃശ്യങ്ങൾ #IranAttackIraqUSBase #IranMissileAttack #IraqUSBase #AinalAsadUSBase #ArbilUSArmyBase
Posted by Madhyamam on Tuesday, January 7, 2020












